ಮಂಗಳವಾರ, ಏಪ್ರಿಲ್ 20, 2021
29 °C

ಎಪಿಎಂಸಿಯಲ್ಲಿ ಗೆಲುವು: ವಲ್ಯ್‌ಪುರ ವಿಶ್ವಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನಿರ್ದೇಶಕರಾಗಿ ನಾಲ್ಕು ಮಂದಿ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಆಧಿಕಾರಿ ಬಿ.ಕೃಷ್ಣಪ್ಪ ತಿಳಿಸಿದ್ದಾರೆ.ಚಿಂಚೋಳಿ ಕ್ಷೇತ್ರದಿಂದ ನಾರಾಯಣ ನಾಗಯ್ಯ ಕೊಟ್ರಕಿ, ಐನಾಪುರ ಕ್ಷೇತ್ರದಿಂದ ಗೋಪಾಲರೆಡ್ಡಿ ರಾಜರೆಡ್ಡಿ, ಗಡಿಕೇಶ್ವಾರ್ ಕ್ಷೇತ್ರದಿಂದ ಕರಬಸಪ್ಪ ಶಾಂತಪ್ಪ ಹಲಚೇರಾ ಹಾಗೂ ವರ್ತಕರ ಕ್ಷೇತ್ರದಿಂದ ಅಜೀತ ಬಾಬುರಾವ್ ಪಾಟೀಲ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಗೆಲ್ಲುವ ವಿಶ್ವಾಸ: ಅವಿರೋಧ ಆಯ್ಕೆಯಾದ ತಮ್ಮ ಬೆಂಬಲಿಗರಾದ ನಾರಾಯಣ ಕೊಟ್ರಕಿ, ಅಜೀತ ಬಾಬುರಾವ್ ಪಾಟೀಲ್ ಹಾಗೂ ಗೋಪಾಲರೆಡ್ಡಿ ಅವರನ್ನು ಅಭಿನಂದಿಸಿ ಸಿದ್ದಿಗಾರರೊಂದಿಗೆ ಮಾತನಾಡಿದರು.ಎಪಿಎಂಸಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸ ವ್ಯಕ್ತ ಪಡಿಸಿದ ಶಾಸಕ ಸುನೀಲ ವಲ್ಯ್‌ಪುರ, ಆಡಳಿತ ಚುಕ್ಕಾಣಿ ಬಿಜೆಪಿ ವಶಕ್ಕೆ ಬರುವುದು ಖಚಿತ ಎಂದರು.ಅವಿರೋಧ ಆಯ್ಕೆಯಲ್ಲಿ ಚಿಂಚೋಳಿ, ಐನಾಪೂರ ಹಾಗೂ ವರ್ತಕರ ಕ್ಷೇತ್ರದಿಂದ ಆಯ್ಕೆಯಾದವರು ತಮ್ಮ ಬೆಂಬಲಿಗರಾಗಿದ್ದು, ಚುನಾವಣೆಯಲ್ಲಿ ಎಲ್ಲ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎಂದು ವಿಶ್ವಾಸದಿಂದ ನುಡಿದರು.ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕುಡಿವ ನೀರಿನ ಸಮಸ್ಯೆಗೆ ಸ್ಪಂದಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಸರ್ಕಾರ ಪ್ರತಿ ಕ್ಷೇತ್ರಕ್ಕೆ 15 ಲಕ್ಷ ರೂಪಾಯಿ ಬಿಡುಗಡೆ ಮಾಡಿದ್ದು, ಕೊಳವೆ ಬಾವಿಗಳನ್ನು ಕೊರೆಸಲಾಗುತ್ತಿದೆ ಎಂದರಲ್ಲದೇ, 13ನೇ ಹಣಕಾಸು ಯೋಜನೆ ಅಡಿಯಲ್ಲಿಯೂ ನೀರಿನ ಸಮಸ್ಯೆ ನಿವಾರಣೆಗೆ ಹಣ ಮೀಸಲಾಗಿರಿಸಲಾಗಿದೆ ಎಂದರು.ಬಿಜೆಪಿ ಮುಖಂಡರಾದ ವಿಠಲರೆಡ್ಡಿ ಬೆನಕೆಪಳ್ಳಿ, ಗುರುಲಿಂಗಪ್ಪ ಚಿಟ್ಟಾ ರಾಜಾಪೂರ, ತಾಲ್ಲೂಕು ಬಿಜೆಪಿ ಅಧ್ಯಕ್ಷ ರೇವಣಸಿದ್ದಪ್ಪ ಮಜ್ಜಗಿ ಮುಂತಾದವರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.