ಶನಿವಾರ, ಜೂನ್ 12, 2021
23 °C

ಎಪಿಎಂಸಿ ಅಧ್ಯಕ್ಷರಾಗಿ ಟಿ.ಬಿ.ರೇವಣ್ಣ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತರೀಕೆರೆ: ತರೀಕೆರೆ ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ನೂತನ ಅಧ್ಯಕ್ಷರಾದ ಕಾಂಗ್ರೆಸ್‌ನ ಟಿ.ಬಿ.ರೇವಣ್ಣ ಆಯ್ಕೆಯಾದರು.

ಪಟ್ಟಣದ ಎಪಿಎಂಸಿ ಕಾರ್ಯಾಲಯ ದಲ್ಲಿ ಸೋಮವಾರ ನಡೆದ ಚುನಾ ವಣೆಯಲ್ಲಿ ಟಿ.ಬಿ.ರೇವಣ್ಣ  ತನ್ನ ಪ್ರತಿಸ್ಪರ್ಧಿ ಎಸ್.ಗಂಗಾಧರಪ್ಪ ಅವರ ವಿರುದ್ಧ ಒಂದು ಮತದ ಅಂತರದಿಂದ ಜಯಶೀಲರಾದರು.16 ಸದಸ್ಯರ ಸಂಖ್ಯಾ ಬಲವಿರುವ ಮಾರುಕಟ್ಟೆ ಸಮಿ ತಿಯ ಚುನಾವಣೆಯಲ್ಲಿ ಟಿ.ಬಿ. ರೇವಣ್ಣ 8 ಮತಗಳನ್ನು ಪಡೆದರೆ ಗಂಗಾಧರಪ್ಪ 7 ಮತಗಳನ್ನು ಪಡೆ ದರು. ಗೋವಿಂ ದಪ್ಪ ಗೈರು ಹಾಜರಾದರು.ನೂತನ ಅಧ್ಯಕ್ಷ ಟಿ.ಬಿ. ರೇವಣ್ಣನವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಜಿ.ಎಚ್. ಶ್ರೀನಿವಾಸ್, ರೈತರ ಹಿತಾಸಕ್ತಿ ಕಾಪಾಡಲು ಅಗತ್ಯ ಕ್ರಮ ಜರುಗಿಸು ವುದರೊಂದಿಗೆ ತರಕಾರಿ, ಹಣ್ಣು ಬೆಳೆ ಗಾರರಿಗೆ ಮತ್ತು ರೈತರ  ಆಹಾರ ಪದಾರ್ಥಗಳನ್ನು ಸಂರಕ್ಷಿಸಿಡಲು  ವೈಜ್ಞಾನಿಕ ಗೋಡೌನ್ ಹಾಗೂ ಶಿಥಲೀಕರಣ ಕೇಂದ್ರ ಸ್ಥಾಪಿಸುವಲ್ಲಿ ಕ್ರಮ ಜರುಗಿಸುವಂತೆ ತಿಳಿಸಿದರು. ದಲ್ಲಾಳಿಗಳನ್ನು ನಿಯಂತ್ರಿಸಿ ಎಪಿಎಂಸಿ ಅಧಿಕಾರಿಗಳು ಸರ್ಕಾರಕ್ಕೆ ಆದಾಯ ತಂದುಕೊಡುವಲ್ಲಿ ಮುಂದಾಗಬೇಕು. ಅಧಿಕಾರಿಗಳು ಸ್ವಂತ ಹಿತಾಸಕ್ತಿಗಾಗಿ ರೈತರನ್ನು ಬಲಿ ಕೊಡದೆ ರೈತ ಪರವಾದ ನಿಲುವನ್ನು ಬೆಳೆಸಿಕೊಳ್ಳಬೇಕು ಎಂದರು.ನೂತನ ಅಧ್ಯಕ್ಷ ರೇವಣ್ಣ ಮಾತನಾಡಿ ರೈತರ ಅಭಿಪ್ರಾಯ ಪಡೆದು ಕೃಷಿ ಮಾರುಕಟ್ಟೆ ವ್ಯವಸ್ಥೆಯಲ್ಲಿ ಸೂಕ್ತ ಬದಲಾವಣೆ ತಂದು ರೈತರ ಹಿತ ಕಾಪಾ ಡಲಾಗುವುದು. ರೈತ ಮುಖಂಡರ ಸಲಹೆ ಮೇರೆಗೆ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದರು.

ಜಿಲ್ಲಾಪಂಚಾಯಿತಿ ಸದಸ್ಯರ ಕೆ.ಪಿ. ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಘನಿ, ರವಿಶಾನುಭೋಗ್ ಹಾಗೂ ಎಪಿಎಂಸಿ ಸದಸ್ಯರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.