ಎಪಿಎಂಸಿ ಚುನಾವಣೆ: 39 ಅಭ್ಯರ್ಥಿಗಳು ಕಣದಲ್ಲಿ

ಬುಧವಾರ, ಜೂಲೈ 17, 2019
25 °C

ಎಪಿಎಂಸಿ ಚುನಾವಣೆ: 39 ಅಭ್ಯರ್ಥಿಗಳು ಕಣದಲ್ಲಿ

Published:
Updated:

ಹುಣಸೂರು: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಗೆ ಜೂನ್ 12 ರಂದು ನಡೆಯಲಿರುವ ಚುನಾವಣಾ ಕಣದಲ್ಲಿ 39 ಅಭ್ಯರ್ಥಿಗಳು ಇದ್ದಾರೆ. ಹರವೆ ಕ್ಷೇತ್ರ ( ಸಾಮನ್ಯ ಮಹಿಳೆ) ಶಾರದಮ್ಮ  ಸುಧಾ ನಟರಾಜ್. ಗಾವಡಗೆರೆ (ಪರಿಶಿಷ್ಟ ಪಂಗಡ) ಕೆ.ಎ.ಸಣ್ಣಯ್ಯನಾಯ್ಕ, ಆನಂದೂರುನಾಯ್ಕ, ಚಾಮನಾಯ್ಕ. ಬಿಳಿಕೆರೆ (ಸಾಮಾನ್ಯ)  ಮಲ್ಲೇಶ್, ಆರ್,ಮಹದೇವ್. ಧರ್ಮಾಪುರ (ಸಾಮಾನ್ಯ) ಎ.ಸಿ. ಕೆಂಪೇಗೌಡ, ಎಚ್.ಕೆ. ನಾಗಣ್ಣ, ಪಾಪೇಗೌಡ, ಡಿ.ಮಹದೇವೇಗೌಡ, ಮಹೇಂದ್ರ. ಕರಿಮುದ್ದನಹಳ್ಳಿ (ಸಾಮಾನ್ಯ) ಚಂದ್ರಶೇಖರ್, ಕೆ.ಆರ್.ಪುಣ್ಯಶೀಲ, ವೆಂಕಟೇಶ್ ಕೆಂಪೇಗೌಡ. ಬನ್ನಿಕುಪ್ಪೆ (ಬಿ.ಸಿ.ಎಂ-ಬಿ) ಈರೇ ಗೌಡ, ಎಸ್.ಬಸವರಾಜು, ರವೀಂದ್ರ ಗೌಡ, ರಾಜೇಗೌಡ, ಸೋಮಶೇಖರ್. ಮರದೂರು (ಬಿ.ಸಿ.ಎಂ-ಎ) ಕೆ.ಎ.ಮಹದೇವ್, ಎಂ.ಕೆ.ವಾಸೇ ಗೌಡ, ಎಸ್.ಎನ್‌ಶಂಕರೇಗೌಡ. ದೊಡ್ಡಹೆಜ್ಜೂರು (ಎಸ್‌ಸಿ) ಕಮಲಮ್ಮ, ಪಾರ್ವತಮ್ಮ ಬಿ.ಕೆ.ಪರಮೇಶ್ವರ್, ವೆಂಕಟಪಾಪಯ್ಯ, ಹರಿಹರ ಆನಂದಸ್ವಾಮಿ. ಚಿಲ್ಕುಂದ (ಸಾಮಾನ್ಯ) ಕೆ.ಎಂ.ವೀರಣ್ಣ, ಕರುಣಾಕರ, ಎಚ್.ಕೆ.ಸುರೇಶ್. ಹನಗೋಡು (ಸಾಮಾನ್ಯ)  ಡಿ.ಎ. ಪ್ರಭಾಕರ್ ಹೆಗಡೆ, ಎಚ್.ಎಸ್.ರಮೇಶ್, ರವಿಗೌಡ. ದೊಡ್ಡಹೆಜ್ಜೂರು (ಸಾಮಾನ್ಯ) ಬಸವರಾಜು, ಎಚ್.ಕೆ. ಶಿವಕುಮಾರ್, ಸಿದ್ದಲಿಂಗೇ ಗೌಡ. ವರ್ತಕರ ಕ್ಷೇತ್ರ : ಎಚ್.ಕೆ. ಅರಣ್, ಜ್ಯೋತಿಕುಮಾರ್ ಸ್ಪರ್ಧಿಸಿದ್ದಾರೆ.ತೀವ್ರ ಪೈಪೋಟಿ: ಎಪಿಎಂಸಿಯು ಈ ಹಿಂದೆ ಜೆಡಿಎಸ್ ವಶದಲ್ಲಿತ್ತು. ಬಿಜೆಪಿಯ ಜಿ.ಟಿ.ದೇವೇಗೌಡ, ಜೆ.ಡಿ.ಎಸ್.ನ ಜಿಲ್ಲಾಧ್ಯಕ್ಷ ಎಸ್.ಚಿಕ್ಕಮಾದು ಮತ್ತು ಶಾಸಕ     ಎಚ್.ಪಿ.ಮಂಜುನಾಥ್ ಚುನಾವಣೆ ಯನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ತೀವ್ರ ಕುತೂಹಲ ಕೆರಳಿಸಿದೆ.ಎಪಿಎಂಸಿಯಲ್ಲಿ ಖಾತೆ ತೆರೆಯದ ಕಾಂಗ್ರೆಸ್ ಈ ಬಾರಿ 3-4 ಸ್ಥಾನ ಗೆಲ್ಲುವ ವಿಶ್ವಾಸವನ್ನು ಹೊಂದಿದೆ. ಬಿಜೆಪಿ ಪಾಳೆಯಲ್ಲಿ ಅಭ್ಯರ್ಥಿ ಪಟ್ಟಿ ಸಿದ್ಧಪಡಿಸುವ ಹಂತದಿಂದಲೇ ತೀವ್ರ ಪೈಪೋಟಿ ಕಂಡುಬಂದಿತು. ಈ ಚುನಾವಣೆಯಲ್ಲಿ ಹಣದ ಹೊಳೆ ಹರಿಯುವ  ಎಲ್ಲಾ ಸಾಧ್ಯತೆ ಈಗಾಗಲೇ ಹೊರ ನೋಟಕ್ಕೆ ಕಾಣುತ್ತಿದೆ.  ತಾಲ್ಲೂಕಿನಲ್ಲಿ ಒಟ್ಟು 63780 ಮತದಾರರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry