ಮಂಗಳವಾರ, ಮೇ 11, 2021
26 °C

ಎಪಿಎಂಸಿ ಪ್ರಾಂಗಣದಲ್ಲಿಯೇ ತೂಕಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಕನೂರು: ರೈತರ ದವಸ ಧಾನ್ಯಗಳನ್ನು ಇಲ್ಲಿಯ ಎ.ಪಿ.ಎಂ.ಸಿ ಮಾರುಕಟ್ಟೆಯ ಪ್ರಾಂಗಣದಲ್ಲಿ ತೂಕ ಮಾಡಲು ಅನುಕೂಲ ಕಲ್ಪಿಸಬೇಕೆಂದು ರುದ್ರಮುನೀಶ್ವರ ಹಮಾಲರ ಹಾಗೂ ಕಾರ್ಮಿಕ ಸಂಘದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.ಎ.ಪಿ.ಎಂ.ಸಿ ಅಧ್ಯಕ್ಷರಿಗೆ ಈಚೆಗೆ ಮನವಿ ಸಲ್ಲಿಸಿದ ಹಮಾಲರ ಸಂಘದ ಪದಾಧಿಕಾರಿಗಳು, ಹಲವಾರು ವರ್ಷಗಳಿಂದ ಹಮಾಲರಾಗಿ ಕೆಲಸ ನಿರ್ವಹಿಸುತ್ತಿದ್ದೇವೆ. ತಾಲ್ಲೂಕಿನ ಎ.ಪಿ.ಎಂ.ಸಿ ಮುಖ್ಯ ಕಚೇರಿ ಕುಕನೂರಿನಲ್ಲಿಯೇ ಇದ್ದಾಗ್ಯೂ ಕೂಡ ಮಾರುಕಟ್ಟೆಗೆ ಬರುವ ದವಸ ಧಾನ್ಯಗಳನ್ನು ಪ್ರಾಂಗಣದಲ್ಲಿ ತೂಕ ಮಾಡಿಸದೇ ಇರುವುದರಿಂದ ತುಂಬಾ ತೊಂದರೆಯಾಗಿದೆ. ಹಮಾಲರ ಹಿತದೃಷ್ಟಿಯಿಂದ ಮಾರುಕಟ್ಟೆಗೆ ಎಲ್ಲ ದವಸ ಧಾನ್ಯಗಳನ್ನು ಪ್ರಾಂಗಣದಲ್ಲಿಯೇ ತೂಕ ಮಾಡಿಸಲು ತುರ್ತು ಕ್ರಮ ಕೈಗೊಳ್ಳಬೇಕು.ಜೊತೆಗೆ ಹಮಾಲರಿಗಾಗಿ ವಿಶ್ರಾಂತಿ ಭವನವನ್ನು ನಿರ್ಮಿಸಿಕೊಡಬೇಕು. ನಿರ್ಲಕ್ಷ್ಯ ಧೋರಣೆ ಅನುಸರಿಸಿದರೆ ಅನಿವಾರ್ಯವಾಗಿ ಹೋರಾಟ ಮಾಡಬೇಕಾಗುತ್ತದೆ ಎಂದು ಸಂಘದ ಅಧ್ಯಕ್ಷ ನಿಂಗಪ್ಪ ಗೊರ್ಲೆಕೊಪ್ಪ, ವಿರುಪಾಕ್ಷಪ್ಪ ಭಂಡಾರಿ, ದೇವಪ್ಪ ಗುಡದಳ್ಳಿ, ಶರಣಪ್ಪ ಹಿರೇಕೊಪ್ಪ, ಬಾಳಪ್ಪ ಸುಂತಾನಿ, ಹನುಮಪ್ಪ ಹಳ್ಳಿ, ಹನುಮಪ್ಪ ಭಂಡಾರಿ, ಬಸವರಾಜ ಅಣ್ಣಿಗೇರಿ ಮತ್ತಿತರರು ಆಗ್ರಹಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.