ಎಪಿಎಂಸಿ ಮಾರುಕಟ್ಟೆಗೆ ಕಾಯಕಲ್ಪ: ಡಿ.ಸಿ.

7

ಎಪಿಎಂಸಿ ಮಾರುಕಟ್ಟೆಗೆ ಕಾಯಕಲ್ಪ: ಡಿ.ಸಿ.

Published:
Updated:

ಕೋಲಾರ: ನಗರ ಹೊರವಲಯದ ಎಪಿಎಂಸಿ ಮಾರುಕಟ್ಟೆಯಲ್ಲಿ ಸೌಕರ್ಯಗಳ ಕೊರತೆ ಇದ್ದು, ಅವುಗಳನ್ನು ನೀಗಿಸುವ ನಿಟ್ಟಿನಲ್ಲಿ ಚಿಂತಿಸಲಾಗುವುದು ಎಂದು  ಜಿಲ್ಲಾ­ಧಿಕಾರಿ ಡಿ.ಕೆ.ರವಿ ತಿಳಿಸಿದರು.ಮಾರುಕಟ್ಟೆಗೆ ಶುಕ್ರವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರೊಡನೆ ಮಾತ­ನಾಡಿದ ಅವರು, ಏಷ್ಯಾದಲ್ಲೆ ಅತ್ಯಂತ ದೊಡ್ಡ ಟೊಮೆಟೊ ಮಾರು­ಕಟ್ಟೆ ಎಂದೇ ಖ್ಯಾತವಾಗಿರುವ ಇಲ್ಲಿ ಟೊಮೆಟೊ ತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡುವ ವ್ಯವಸ್ಥೆಯೇ ಇಲ್ಲ. ಮಾರುಕಟ್ಟೆಯಲ್ಲಿ ರಸ್ತೆ, ಚರಂಡಿ ಸೌಕರ್ಯ ಸರಿ­ಯಾಗಿಲ್ಲ. ಅವುಗಳನ್ನು ಸರಿಪಡಿಸಿ ಮಾರುಕಟ್ಟೆಗೆ ಕಾಯಕಲ್ಪ ನೀಡು­ವುದು ಅಗತ್ಯವಿದೆ ಎಂದರು.ರೈತರಿಗೆ ಅಧಿಕೃತ ರಸೀದಿ ನೀಡದಿ­ರುವುದು, ಕಮಿಷನ್‌ ಪಡೆಯುವುದು ಸೇರಿದಂತೆ ದಲ್ಲಾಳಿಗಳ ಶೋಷಣೆಯ ವಿರುದ್ಧವೂ ಕ್ರಮ ಕೈಗೊಳ್ಳ­ಲಾಗು­ವುದು. ದರ ನಿಗದಿ ಮಾಹಿತಿಯನ್ನು ವಿದ್ಯುನ್ಮಾನ ಫಲಕಗಳಲ್ಲಿ ಪ್ರದರ್ಶಿಸು­ವುದೂ ಸೇರಿದಂತೆ ವಹಿವಾಟನ್ನು ಪಾರದರ್ಶಕವಾಗಿ ನಡೆಸುವಂತೆ ಎಪಿಎಂಸಿಗೆ ಸೂಚನೆ ನೀಡಲಾಗು­ವುದು. ರೈತರ ಪ್ರತಿನಿಧಿಗಳೇ ಅಲ್ಲಿರು­ವುದರಿಂದ ಅವರ ಸಹಕಾರವೂ ಅಗತ್ಯ­ವಿದೆ ಎಂದು ಅವರು ಅಭಿಪ್ರಾಯ­ಪಟ್ಟರು.ಸೂಚನೆ: ಎಪಿಎಂಸಿ ಆಡಳಿತ ಮಂಡಳಿ ಮನವಿ ಮೇರೆಗೆ ಮಾರುಕಟ್ಟೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಮಾರು­ಕಟ್ಟೆಯಲ್ಲಿ ನಡೆಸುತ್ತಿರುವ ವಹಿ­ವಾಟಿನ ಬಗ್ಗೆ ಆಡಳಿತ ಮಂಡಳಿ­ಯೊಂದಿಗೆ ಚರ್ಚಿಸಿದರು.ದೂರದ ಊರುಗಳಿಂದ ತರಕಾರಿ­ಗಳನ್ನು ಮಾರುಕಟ್ಟೆಗೆ ತರುವ ರೈತರಿಗೆ ಮಾರುಕಟ್ಟೆಯ ಆವರಣದಲ್ಲಿ ಕುಡಿ­ಯುವ ನೀರು ಸೇರಿದಂತೆ ಮೂಲ­ಸೌಲಭ್ಯ ಒದಗಿಸಿಕೊಡುವುದರ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದು ಸೂಚಿಸಿದರು.ಮನವಿ: ಇದೇ ಸಂದರ್ಭದಲ್ಲಿ ಮನವಿ ಸಲ್ಲಿಸಿದ ಎಪಿಎಂಸಿ ಪ್ರಮುಖರು, ಪ್ರಾಂಗಣದ ಮುಂಭಾಗದ ಮಾಲೂರು ರಸ್ತೆಯು ಹಾಳಾಗಿದ್ದು ವಾಹನ ಸಂಚಾರಕ್ಕೆ ಅನಾನುಕೂಲ­ವಾಗುತ್ತಿದೆ. ರಸ್ತೆಯನ್ನು ದುರಸ್ತಿ ಮಾಡಿಸುವ ಸಂಬಂಧ ಲೋಕೋಪ­ಯೋಗಿ ಇಲಾಖೆಗೆ ನಿರ್ದೇಶನ ನೀಡಬೇಕು, ಸಮಿತಿಯ ಪ್ರಾಂಗಣದ ಮಧ್ಯಬಾಗದಲ್ಲಿ ಹಾದು ಹೋಗಿರುವ 220 ಕೆ.ವಿ ಹೈಟೆನ್ಷನ್ ವಿದ್ಯುತ್ ಲೈನ್ ಅನ್ನು ಸ್ಧಳಾಂತರಿಸಿದಲ್ಲಿ ಆ ಜಾಗವನ್ನು ವ್ಯಾಪಾರ ವಹಿವಾಟಿಗೆ ತಕ್ಕಂತೆ ಅಭಿವೃದ್ಧಿಪಡಿಸಲು ಸಾಧ್ಯ ಎಂದು ಕೋರಿದರು.ಎಪಿಎಂಸಿ ಅಧ್ಯಕ್ಷೆ ರಾಜೇಶ್ವರಿ, ಉಪಾಧ್ಯಕ್ಷ ರಾಮು, ನಿರ್ದೇಶಕರಾದ ನಟರಾಜ್, ಪ್ರಕಾಶ್, ಈರಪ್ಪ, ಗೋಪಾಲಪ್ಪ, ರಮೇಶ್, ನಾರಾ­ಯಣ­ಸ್ವಾಮಿ, ಫಾಲಾಕ್ಷಗೌಡ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry