ಎಫ್‌ಎಂ ಪ್ರಾಯೋಗಿಕ ಪ್ರಸಾರ; ಕೇಳುಗರಲ್ಲಿ ಸಂಚಲನ

7

ಎಫ್‌ಎಂ ಪ್ರಾಯೋಗಿಕ ಪ್ರಸಾರ; ಕೇಳುಗರಲ್ಲಿ ಸಂಚಲನ

Published:
Updated:

ಭದ್ರಾವತಿ: ಯುವ ಕೇಳುಗರ ಹೃದಯ ಗೆದ್ದಿರುವ ಎಫ್‌ಎಂ ಇಲ್ಲಿನ ಆಕಾಶವಾಣಿ ಮೂಲಕ ಪ್ರಸಾರವಾಗುತ್ತಿದೆ ಎಂಬ ವಿಷಯ ನಾಗರಿಕರ ಪಾಲಿಗೆ ಸಂತೋಷದ ಸುದ್ದಿಯಾಗಿದೆ.ಹೌದು ! ಹಲವು ದಶಕದ ಕನಸಾಗಿರುವ ಮಲೆನಾಡಿನ ಜನರ ಬಹು ಬೇಡಿಕೆಯ ಎಫ್‌ಎಂ ಟವರ್ ಸಿದ್ಧವಾಗಿ ವರ್ಷಗಳು ಉರುಳಿದೆ. ಕೆಲ ದಿನದಿಂದ ಇಲ್ಲಿನ ಜನರ ಬಾಯಲ್ಲಿ `ನನ್ನ ಮೊಬೈಲ್‌ಗೆ ಎಫ್‌ಎಂ ಕ್ಯಾಚ್ ಆಗಿದೆ. ಇದ್ದಕ್ಕಿದ್ದಂತೆ ಸಿಗುತ್ತಿದೆ, ಬೆಂಗಳೂರು ಎಫ್‌ಎಂ ದೊರೆತಿದೆ... `ಎಂಬ ಕುತೂಹಲದ ಮಾತುಗಳು ಹರಿದಾಡುತ್ತಿವೆ.ಈ ಕುರಿತು `ಪ್ರಜಾವಾಣಿ' ಖುದ್ದು ಆಕಾಶವಾಣಿ ಅಧಿಕಾರಿಗಳನ್ನು ಸಂಪರ್ಕಿಸುವ ಯತ್ನ ನಡೆಸಿದ ಸಂದರ್ಭದಲ್ಲಿ ಸಿಕ್ಕ ಮಾಹಿತಿ ಪ್ರಕಾರ ಕಳೆದ 15ದಿನದಿಂದ `ಟೆಸ್ಟ್ ಟ್ರಾನ್ಸ್‌ಮಿಷನ್' ಹೆಸರಿನಲ್ಲಿ ಎಫ್‌ಎಂ ಬೆಂಗಳೂರು ಮರುಪ್ರಸಾರ ನಡೆದಿದೆ.ಇದು ದಿನಕ್ಕೆ ಅರ್ಧ, ಒಂದು, ಎರಡು... ಹೀಗೆ ಹತ್ತು ಹಲವು ಗಂಟೆಗಳ ಕಾಲ ನಿರಂತರವಾಗಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ಅದು ತಲುಪುತ್ತಿರುವ ಸ್ಥಳ, ಅದರ ಪ್ರಸಾರ ಶಕ್ತಿ ಹಾಗೂ ಇದನ್ನು ಸ್ವೀಕರಿಸಿ ಪುನರ್ ಪ್ರಸಾರ ಮಾಡುವ  ಕುರಿತಾಗಿ ನಡೆದಿರುವ ಹಲವು ಪ್ರಯೋಗ ಮಾತ್ರವಾಗಿದೆ. ಇದಕ್ಕಾಗಿ ಹಲವು ಹೊಸ ತಾಂತ್ರಿಕ ಸಲಕರಣೆಗಳು, ಅಗತ್ಯವಿರುವ ಬಿಎಸ್‌ಎನ್‌ಎಲ್ ಸೇವೆ, ಅದು ದುರಸ್ತಿಗೆ ಬಂದಾಗ ಅವುಗಳ ಬದಲಾವಣೆ... ಹೀಗೆ ಹಲವು ಸನ್ನಿವೇಶಗಳು ಎದುರಾದಾಗ ಕೈಗೊಳ್ಳಬೇಕಾದ ತಾಂತ್ರಿಕ ವಿಷಯಗಳ  ಕೆಲಸ ನಡೆದಿದೆ.ದೆಹಲಿ ಮಟ್ಟದಿಂದ ಕೆಲ ತಾಂತ್ರಿಕ ಸಲಹಕರಣೆಗಳು ಬರಬೇಕಿದ್ದು, ಅದಕ್ಕೆ ಪೂರಕವಾಗಿ ಸಾಮರ್ಥ್ಯ ವಿಸ್ತರಿಸುವ ಚಿಂತನೆಯ ಕಾರ್ಯ ನಡೆದಿದೆ. ಈ ಎಲ್ಲವನ್ನು ಪ್ರಾಯೋಗಿಕ ಪ್ರಸಾರ ಮೂಲಕ ತಿಳಿಯುವ ಕೆಲಸ ನಡೆದಿದ್ದು ಅಧಿಕೃತವಾಗಿ ಇದರ ಆರಂಭ ಇನ್ನು ಆಗಿಲ್ಲ ಎಂಬ ಅಭಿಪ್ರಾಯ ಅಲ್ಲಿನ ಸಿಬ್ಬಂದಿಯಿಂದ ವ್ಯಕ್ತವಾಗಿದೆ.  ಈ ಎಲ್ಲವೂ ಅಂದುಕೊಂಡಂತೆ ಯಶಸ್ವಿಯಾದರೆ ಮುಂದಿನ ಒಂದರಡು ತಿಂಗಳಿನಲ್ಲಿ ಅಧಿಕೃತವಾಗಿ ಭದ್ರಾವತಿ ಆಕಾಶವಾಣಿ ಬಹು ಬೇಡಿಕೆಯ ಎಫ್‌ಎಂ ಪ್ರಸಾರ ಆರಂಭಿಸಲಿದೆ ಎಂಬುದು  ಹೆಮ್ಮೆಯ ಸಂಗತಿ.                                                                                                                             

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry