ಸೋಮವಾರ, ಜೂನ್ 21, 2021
20 °C

ಎಫ್‌ಎಂ ರೇಡಿಯೊ 3ನೇ ಹಂತದ ಲೈಸೆನ್ಸ್ ಹರಾಜು; 1,500 ಕೋಟಿ ಆದಾಯ ನಿರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಫ್‌ಎಂ ರೇಡಿಯೊ 3ನೇ ಹಂತದ ಲೈಸೆನ್ಸ್ ಹರಾಜು; 1,500 ಕೋಟಿ ಆದಾಯ ನಿರೀಕ್ಷೆ

ನವದೆಹಲಿ (ಪಿಟಿಐ): ಸರ್ಕಾರವು ಈಗಿನ 86 ನಗರಗಳೊಂದಿಗೆ ಹೆಚ್ಚುವರಿಯಾಗಿ 227 ನಗರಗಳಲ್ಲಿ ಸೇವೆ ಒದಗಿಸುವ ಎಫ್‌ಎಂ ರೇಡಿಯೊ 3ನೇ ಹಂತದ ಲೈಸೆನ್ಸ್ ಹರಾಜಿನಿಂದ ರೂ 1,500 ಕೋಟಿಗಳ ಆದಾಯ ಸಂಪಾದಿಸುವ ನಿರೀಕ್ಷೆ ಹೊಂದಿದೆ.ಈ ವಿಷಯವನ್ನು ಮಂಗಳವಾರ ಇಲ್ಲಿ `ಸಿಎಎಸ್‌ಬಿಎಎ ಇಂಡಿಯಾ ಫೋರಂ 2012~ ಕಾರ್ಯಕ್ರಮದ ಸಂದರ್ಭದಲ್ಲಿ ಸುದ್ದಿಗಾರರಿಗೆ ತಿಳಿಸಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಕಾರ್ಯದರ್ಶಿ ಉದಯ್ ಕುಮಾರ್ ವರ್ಮ, `ಮೂರು ಹಂತಗಳ ಲೈಸೆನ್ಸ್ ಹರಾಜಿನಿಂದ ಒಂದು ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ಎಲ್ಲ ನಗರಗಳಿಗೂ ಖಾಸಗಿ ಎಫ್‌ಎಂ ಚಾನೆಲ್‌ಗಳ ಸೇವೆ ಒದಗಿಸಿದಂತಾಗುವುದು~ ಎಂದು ಹೇಳಿದರು.ಹಣಕಾಸು ಸಚಿವಾಲಯವು ಮೊದಲ ಹಂತದ ಎಫ್‌ಎಂ ರೇಡಿಯೋ ಲೈಸೆನ್ಸ್ ಸೇವೆಯ ಹರಾಜಿನಿಂದ ರೂ 500 ಕೋಟಿಗಳ ಆದಾಯವನ್ನು ಅಂದಾಜಿಸಿದೆ. ಹರಾಜನ್ನು ಮೂರು ಹಂತಗಳಲ್ಲಿ ಮಾಡಿದ್ದು, ಮೊದಲ ಹಂತದ ಸೇವೆ ಈ ವರ್ಷದ ಅಂತ್ಯದೊಳಗೆ ಪೂರ್ಣವಾಗಲಿದೆ.

 

ಸರ್ಕಾರವು ಏಕ ಅವಧಿಯ ಪ್ರವೇಶ ಶುಲ್ಕ, ವಲಸೆ ಶುಲ್ಕ, ವಾರ್ಷಿಕ ಶುಲ್ಕ ಮತ್ತಿತರದಿಂದ ಕಳೆದ ಮೇ 31ರವರೆಗೆ ಒಂದನೇ ಮತ್ತು ಎರಡನೇ ಹಂತದ  ಹರಾಜಿನಿಂದ ಒಟ್ಟು ಸುಮಾರು ರೂ 1,733 ಕೋಟಿಗಳ ಆದಾಯ ಸಂಗ್ರಹಿಸಿದೆ ಎಂದು  ವಿವರಿಸಿದರು.ಸರ್ಕಾರವು ಕಳೆದ ವಾರ ಮಂಡಿಸಿದ 2012-13ನೇ ಸಾಲಿನ ಬಜೆಟ್‌ನಲ್ಲಿ ಎಫ್‌ಎಂ ರೇಡಿಯೊ ಸೇವೆಯ 3ನೇ ಹಂತದ ಲೈಸೆನ್ಸ್ ಹರಾಜಿನಿಂದ 1,600 ಕೋಟಿ ತೆರಿಗೆಯೇತರ ಆದಾಯ ಹೆಚ್ಚಳದ ಅಂದಾಜು ಮಾಡಿದೆ.

 

ಆದರೆ ಪ್ರಸಕ್ತ ಹಣಕಾಸು ವರ್ಷ ಕೊನೆಗೊಳ್ಳಲಿರುವ ಇದೇ 31ರೊಳಗೆ ಈ ಹರಾಜನ್ನು ಕಾರ್ಯಗತಗೊಳಿಸಲು ಸಿದ್ಧತೆ ಮಾಡಿಕೊಂಡಿಲ್ಲ ಎನ್ನಲಾಗಿದೆ.

 

 

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.