ಎಫ್‌ಐಐ ಹರಿವು: ಸೂಚ್ಯಂಕ ಏರಿಕೆ

7

ಎಫ್‌ಐಐ ಹರಿವು: ಸೂಚ್ಯಂಕ ಏರಿಕೆ

Published:
Updated:
ಎಫ್‌ಐಐ ಹರಿವು: ಸೂಚ್ಯಂಕ ಏರಿಕೆ

ಮುಂಬೈ (ಪಿಟಿಐ): ಗುರುವಾರದ ವಹಿವಾಟಿನಲ್ಲಿ ಕೆಲಮಟ್ಟಿಗೆ ಸ್ಥಿರತೆ ಸಾಧಿಸಿದ್ದ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು, ಶುಕ್ರವಾರದ ವಹಿವಾಟಿನಲ್ಲಿ 135 ಅಂಶಗಳಷ್ಟು ಏರಿಕೆ ಕಂಡಿದೆ.ಅಮೆರಿಕದ ಆರ್ಥಿಕ ವೃದ್ಧಿ ದರದ ಬಗ್ಗೆ ಮರಳಿದ ಆಶಾಭಾವ ಮತ್ತು ಐರೋಪ್ಯ ಒಕ್ಕೂಟದ ಸಾಲದ ಬಿಕ್ಕಟ್ಟು ಬಗೆಹರಿಯುವ ಸಾಧ್ಯತೆಗಳು, ಸಾಗರೋತ್ತರ ಮಾರುಕಟ್ಟೆಯಲ್ಲಿ ಸಕಾರಾತ್ಮಕ ಪ್ರಭಾವ ಬೀರಿರುವುದು ಮುಂಬೈ ಪೇಟೆಯಲ್ಲಿಯೂ ಪ್ರತಿಫಲನಗೊಂಡಿತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ (ಎಫ್‌ಐಐ) ನಿರಂತರವಾಗಿ ಹರಿದು ಬರುತ್ತಿರುವ ಬಂಡವಾಳವು ಸೂಚ್ಯಂಕ ಏರಿಕೆಯಾಗಲು ನೆರವಾಗುತ್ತಿವೆ.ಅಮೆರಿಕದ ಗೃಹ, ಉದ್ಯೋಗ ಮತ್ತು ಹಣದುಬ್ಬರಕ್ಕೆ ಸಂಬಂಧಿಸಿದ ಅಂಕಿ ಅಂಶಗಳು ಸಕಾರಾತ್ಮಕವಾಗಿರುವುದರಿಂದ ವಿಶ್ವದಾದ್ಯಂತ ಷೇರುಪೇಟೆಗಳಲ್ಲಿ ವಹಿವಾಟು ಚುರುಕುಗೊಂಡಿದೆ. ಮುಂಬೈ ಷೇರುಪೇಟೆಯಲ್ಲಿಯೂ ಉತ್ಸಾಹ ಗರಿಗೆದರಲು ಕಾರಣವಾಗಿರುವ `ಎಫ್‌ಐಐ~ಗಳು ಇದುವರೆಗೆ ರೂ 21 ಸಾವಿರ ಕೋಟಿಗಳಷ್ಟು ಬಂಡವಾಳ ಹೂಡಿಕೆ ಮಾಡಿವೆ.ವಿದ್ಯುತ್, ಭಾರಿ ಯಂತ್ರೋಪಕರಣ, ಐ.ಟಿ ಮತ್ತು ಬ್ಯಾಂಕ್ ಷೇರುಗಳಲ್ಲಿ ಉತ್ತಮ ಖರೀದಿ ಆಸಕ್ತಿ ಕಂಡು ಬಂದಿತು. ಕೆಲ ಆಟೊಮೊಬೈಲ್ ಮತ್ತು ಲೋಹದ ಷೇರುಗಳು ಮಾತ್ರ ನಷ್ಟಕ್ಕೆ ಗುರಿಯಾದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry