ಎಫ್‌ಐಐ ಹೂಡಿಕೆ ಭರಾಟೆ

7

ಎಫ್‌ಐಐ ಹೂಡಿಕೆ ಭರಾಟೆ

Published:
Updated:

ನವದೆಹಲಿ (ಪಿಟಿಐ):  ವಿದೇಶಿ ವಿತ್ತೀಯ ಹೂಡಿಕೆದಾರರ (ಎಫ್‌ಐಐ) ಚಟುವಟಿಕೆಗಳು ಹೆಚ್ಚಿರುವುದರಿಂದ ಈ ವಾರವೂ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಲಾಭದ ಹಾದಿಯಲ್ಲಿ ಮುನ್ನುಗ್ಗುವ ಸಾಧ್ಯತೆ ಇದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಕಳೆದ ನಾಲ್ಕು ವಹಿವಾಟು ಅವಧಿಗಳಲ್ಲಿ ಸೂಚ್ಯಂಕ ಸತತ ಏರಿಕೆ ದಾಖಲಿಸಿದ್ದು, ಒಟ್ಟು 371 ಅಂಶಗಳಷ್ಟು ಏರಿಕೆ ಪಡೆದಿದೆ. ಜಾಗತಿಕ ಷೇರು ಪೇಟೆಗಳು ಚೇತರಿಸಿಕೊಂಡಿರುವುದು ಮತ್ತು ಅಮೆರಿಕದ ನಿರುದ್ಯೋಗ ದತ್ತಾಂಶ ಶೇ 8.3ಕ್ಕೆ ಇಳಿಕೆ ಕಂಡಿರುವುದು ಪೇಟೆಗೆ ಬಲ ತುಂಬಿವೆ.ಸದ್ಯ ಎಲ್ಲ ಸಂಗತಿಗಳು ವಹಿವಾಟಿಗೆ ಪೂರಕವಾಗಿವೆ. ಆದರೆ, ಯಾವುದೇ ಅನಿರೀಕ್ಷಿತ ಬೆಳಣಿಗೆ ಕೂಡ ಪೇಟೆಯ  ದಿಸೆ ಬದಲಿಸಬಹುದು ಎಂದು ಆಷಿಕಾ ಷೇರು ದಲ್ಲಾಳಿ ಸಂಸ್ಥೆಯ ಮುಖ್ಯಸ್ಥ ಪರಾಸ್ ಬೋತ್ರಾ ಅಭಿಪ್ರಾಯಪಟ್ಟಿದ್ದಾರೆ.ಕಳೆದ ವಾರದ ವಹಿವಾಟಿನಲ್ಲಿ ವಿದೇಶಿ ವಿತ್ತೀಯ ಸಂಸ್ಥೆಗಳು ಒಟ್ಟು ್ಙ5,850 ಕೋಟಿ ಮೊತ್ತದ ಷೇರು ಖರೀದಿಸಿವೆ. ಕಳೆದ ವಾರದ ಆರಂಭದ ಮೊದಲ ದಿನ ಸೂಚ್ಯಂಕವು 370 ಅಂಶಗಳಷ್ಟು ಇಳಿಕೆ ಕಂಡಿತ್ತು. ವಿದೇಶೀ ವಿತ್ತೀಯ ಸಂಸ್ಥೆಗಳು  ್ಙ 201 ಕೋಟಿ ಮೌಲ್ಯದ ಷೇರನ್ನು ಮಾರಾಟ ಮಾಡಿ ದ್ದವು. ಯೂರೋ ಬಿಕ್ಕಟ್ಟು ತಗ್ಗಿಸುವ ನಿಟ್ಟಿನಲ್ಲಿ ನಡೆದಿರುವ ಪ್ರಯತ್ನಗಳು ಕೂಡ ಜಾಗತಿಕ ಪೇಟೆಗಳಿಗೆ ಚೇತರಿಕೆ ನೀಡಿದೆ ಎಂದು ಕೋಟಕ್ ಸೆಕ್ಯುರಿಟೀಸ್‌ನ ನಿರ್ದೇಶಕ ಡಿ.ಕಣ್ಣನ್ ಅಭಿಪ್ರಾಯ   ಪಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry