ಎಫ್‌ಡಿಐಗೆ ವಿಮಾ ವಲಯ: ಕಾಂಗ್ರೆಸ್ ವಿಶ್ವಾಸ

7

ಎಫ್‌ಡಿಐಗೆ ವಿಮಾ ವಲಯ: ಕಾಂಗ್ರೆಸ್ ವಿಶ್ವಾಸ

Published:
Updated:

ನವದೆಹಲಿ (ಐಎಎನ್‌ಎಸ್):

ವಿಮಾ ಮತ್ತು ಪಿಂಚಣಿ ಸೇವಾ ವಲಯದಲ್ಲೂ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ)ಗೆ ಅನುಮತಿ ನೀಡುವ ಬಗ್ಗೆ ಸರ್ಕಾರದ ನಿರ್ಧಾರ ಸಂಸತ್ತಿನಲ್ಲಿ ಅಂಗೀಕಾರ ಪಡೆಯಲಿದೆ ಎಂಬ ವಿಶ್ವಾಸವನ್ನು ಕಾಂಗ್ರೆಸ್ ವ್ಯಕ್ತಪಡಿಸಿದೆ.ಎಡ ಪಕ್ಷಗಳು ಮತ್ತು ಬಿಜೆಪಿಯ ವಿರೋಧದ ನಡುವೆಯೂ ಈ ಕಾಯ್ದೆ ಕಾರ್ಯರೂಪಕ್ಕೆ ಬರಲಿದೆ ಎಂಬ ವಿಶ್ವಾಸವನ್ನು ಕಾಂಗ್ರೆಸ್‌ನ ವಕ್ತಾರ ರಸೀದ್ ಅಲ್ವಿ ವ್ಯಕ್ತಪಡಿಸಿದ್ದಾರೆ.ಈ ವಿಧೇಯಕ ರಾಜ್ಯ ಸಭೆಯಲ್ಲಿ ಅ ಂಗೀಕಾರ ಪಡೆಯ ಬೇಕಾದರೆ ಕೋರಂ ಸಮಸ್ಯೆ ತಲೆದೊರುವುದಿಲ್ಲವೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅಲ್ವಿ, ಇಲ್ಲಿ ಗಣಿತದ ಪ್ರಶ್ನೆಯೇ ಇಲ್ಲ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry