ಮಂಗಳವಾರ, ನವೆಂಬರ್ 19, 2019
23 °C

ಎಫ್‌ಡಿಐ ಕ್ರೋಡೀಕೃತ ನೀತಿ ಶೀಘ್ರವೇ ಪ್ರಕಟ

Published:
Updated:

ನವದೆಹಲಿ(ಪಿಟಿಐ): ಕಳೆದೊಂದು ವರ್ಷದಲ್ಲಿ ವಿದೇಶಿ ನೇರ ಹೂಡಿಕೆ(ಎಫ್‌ಡಿಐ)ಗೆ ಸಂಬಂಧಿಸಿ  ಬಹಳಷ್ಟು ಬದಲಾವಣೆಗಳಾಗಿದ್ದು, `ಕ್ರೋಡೀಕೃತ ಎಫ್‌ಡಿಐ-6ನೇ ಆವೃತ್ತಿ' ಇದೇ ವಾರ ಪ್ರಕಟಗೊಳ್ಳಲಿದೆ ಎಂದು`ಕೈಗಾರಿಕಾ ನೀತಿ ಮತ್ತು ಉತ್ತೇಜನ ಇಲಾಖೆ'(ಡಿಐಪಿಪಿ) ಹೇಳಿದೆ.2011-12ನೇ ಹಣಕಾಸು ವರ್ಷದ ಮೊದಲ 10 ತಿಂಗಳಲ್ಲಿ 3100 ಕೋಟಿ ಡಾಲರ್(ರೂ. 1.67 ಲಕ್ಷ ಕೋಟಿ) ವಿದೇಶಿ ನೇರ ಹೂಡಿಕೆ ಹರಿದುಬಂದಿದ್ದರೆ, ಪ್ರಸಕ್ತ ಹಣಕಾಸು ವರ್ಷದ ಅದೇ ಅವಧಿಯಲ್ಲಿ ಶೇ 33ರಷ್ಟು ಕುಸಿತವಾಗಿದೆ. 2100 ಕೋಟಿ ಡಾಲರ್(ರೂ.1.13 ಲಕ್ಷ ಕೋಟಿ)    `ಎಫ್‌ಡಿಐ' ಬಂದಿದೆ.

ಪ್ರತಿಕ್ರಿಯಿಸಿ (+)