ಎಫ್‌ಡಿಐ ಖಂಡನಾ ನಿರ್ಣಯ ತಿರಸ್ಕೃತ ಸಾಧ್ಯತೆ: ಕಮಲ್‌ನಾಥ್ ವಿಶ್ವಾಸ

7

ಎಫ್‌ಡಿಐ ಖಂಡನಾ ನಿರ್ಣಯ ತಿರಸ್ಕೃತ ಸಾಧ್ಯತೆ: ಕಮಲ್‌ನಾಥ್ ವಿಶ್ವಾಸ

Published:
Updated:

ನವದೆಹಲಿ (ಪಿಟಿಐ) : ಚಿಲ್ಲರೆ ಮಾರುಕಟ್ಟೆಯಲ್ಲಿ ವಿದೇಶ ನೇರ ಬಂಡವಾಳ ಹೂಡಿಕೆ ಸಂಬಂಧ ಬಿಜೆಪಿ ನಡೆಸುತ್ತಿರುವ ರಾಜಕಾರಣಕ್ಕೆ ಕೇಂದ್ರ ಸರ್ಕಾರವು ಕಿಡಿಕಾರಿದ್ದು, ಎಫ್‌ಡಿಐ ವಿರುದ್ಧ ಬಿಜಿಪಿ ಮಂಡಿಸಲಿರುವ ಖಂಡನಾ ನಿರ್ಣಯ ಸಂಸತ್‌ನಲ್ಲಿ ಬಿದ್ದು ಹೋಗಲಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಇಲ್ಲಿ ವಿಶ್ವಾಸ ವ್ಯಕ್ತಪಡಿಸಿತು.

ಎಫ್‌ಡಿಐ ಕುರಿತು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಬಿಜೆಪಿಯ ಖಂಡನಾ ನಿರ್ಣಯ ತಿರಸ್ಕೃತವಾಗಲಿದೆ ಎಂಬ ವಿಶ್ವಾಸವಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಮಲ್‌ನಾಥ್ ತಿಳಿಸಿದರು. ಇದೇ ವೆಳೆ, ಎಫ್‌ಡಿಐ ಕುರಿತಾಗಿ ಬಿಜೆಪಿ ನಡೆಸುತ್ತಿರುವ ರಾಜಕಾರಣವನ್ನು ಒಪ್ಪದಂತೆ ಉಳಿದ ಪಕ್ಷಗಳಿಗೆ ಕಮಲ್‌ನಾಥ್ ಮನವಿ ಮಾಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry