ಎಫ್‌ಡಿಐ ಚರ್ಚೆ ಏರಿಳಿತ ನಿರೀಕ್ಷೆ

6

ಎಫ್‌ಡಿಐ ಚರ್ಚೆ ಏರಿಳಿತ ನಿರೀಕ್ಷೆ

Published:
Updated:

ನವದೆಹಲಿ (ಪಿಟಿಐ): ಬಹುಬ್ರಾಂಡ್ ಚಿಲ್ಲರೆ ವಹಿವಾಟಿನಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಸಂಬಂಧಿಸಿದಂತೆ ಲೋಕಸಭೆಯಲ್ಲಿ ಡಿಸೆಂಬರ್ 4, 5 ಮತ್ತು ರಾಜ್ಯಸಭೆಯಲ್ಲಿ ಡಿಸೆಂಬರ್ 6, 7ರಂದು ಚರ್ಚೆ ನಡೆಯಲಿದ್ದು, ಈ ವಾರದ ಷೇರುಪೇಟೆ ವಹಿವಾಟಿನ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಗಳಿವೆ.

ಸರ್ಕಾರ ಕೈಗೊಂಡಿರುವ ಆರ್ಧಿಕ ಸುಧಾರಣಾ ಕ್ರಮಗಳಿಂದ ಕಳೆದ ವಾರ ಸೂಚ್ಯಂಕ ಒಟ್ಟಾರೆ 833 ಅಂಶಗಳಷ್ಟು ಏರಿಕೆ ಕಂಡಿದ್ದು ಕಳೆದ 19 ತಿಂಗಳಲ್ಲೇ ಗರಿಷ್ಠ ಮಟ್ಟ ತಲುಪಿದೆ. `ಎಫ್‌ಡಿಐ' ಗೆ ಅವಕಾಶ ಲಭಿಸುತ್ತದೆ ಎಂಬ ಕಾರಣಕ್ಕೆ ಕಳೆದ ಒಂದು ತಿಂಗಳಿಂದ ವಿದೇಶಿ ಸಾಂಸ್ಥಿ ಹೂಡಿಕೆದಾರರ (ಎಫ್‌ಐಐ) ಚಟುವಟಿಕೆ  ಹೆಚ್ಚಿದೆ ಎಂದು ಕೊಟೆಕ್ ಸೆಕ್ಯುರಿಟೀಸ್ ಮುಖ್ಯಸ್ಥ ದಿಪಿನ್ ಷಾ ಅಭಿಪ್ರಾಯಪಟ್ಟಿದ್ದಾರೆ.

  ಗ್ರೀಸ್ ಸಾಲದ ಬಿಕ್ಕಟ್ಟು ಇತ್ಯರ್ಥಕ್ಕೆ ಸಂಬಂಧಿಸಿದಂತೆ  ಸೋಮವಾರ ಯೂರೋಪ್ ಹಣಕಾಸು ಸಚಿವ  ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಜತೆ ಚರ್ಚೆ ನಡೆಸಲಿದ್ದಾರೆ. ಈ ಸಂಗತಿ ಕೂಡ ಅಂತರರಾಷ್ಟ್ರೀಯ ಷೇರು ವಿನಿಮಯ ಕೇಂದ್ರಗಳಿಗೆ ಚೇತರಿಕೆ ತುಂಬಲಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry