ಎಫ್‌ಡಿಐ ಜಾರಿಗೆ ಒಮ್ಮತದ ನಿರ್ಧಾರ : ಆನಂದ್ ಶರ್ಮಾ

7

ಎಫ್‌ಡಿಐ ಜಾರಿಗೆ ಒಮ್ಮತದ ನಿರ್ಧಾರ : ಆನಂದ್ ಶರ್ಮಾ

Published:
Updated:

ಚೆನ್ನೈ (ಪಿಟಿಐ) : ಚಿಲ್ಲರೆ ಮಾರುಕಟ್ಟೆಯಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಹಲವು ರಾಜ್ಯಗಳಿಂದ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಎಫ್‌ಡಿಐ ಜಾರಿಗೆ ಕೇಂದ್ರ ಸರ್ಕಾರ ಒಮ್ಮತದ ನಿರ್ಧಾರ ಕೈಗೊಂಡಿದೆ ಎಂದು ಕೈಗಾರಿಕೆ ಮತ್ತು ಜವಳಿ ಖಾತೆ ಸಚಿವ ಆನಂದ್ ಶರ್ಮಾ ಅವರು ಭಾನುವಾರ ಇಲ್ಲಿ ತಿಳಿಸಿದ್ದಾರೆ.ಎಫ್‌ಡಿಐ ಜಾರಿ ಕುರಿತು ಈಗಾಗಲೇ 10 ರಾಜ್ಯಗಳು ಸಕಾರಾತ್ಮಕವಾಗಿ ಸ್ಪಂದಿಸಿವೆ. ಉಳಿದ ರಾಜ್ಯಗಳೂ ತಮ್ಮ ಒಪ್ಪಿಗೆ ಸೂಚಿಸಬಹುದು ಎಂದಿರುವ ಆನಂದ್ ಶರ್ಮಾ, ಎಫ್‌ಡಿಐ ಕುರಿತು ಸಂವಿಧಾನದ ಹಿತಾಸಕ್ತಿಗೆ ಧಕ್ಕೆಯಾಗದಂತೆ ಪಾರದರ್ಶಕವಾಗಿ, ಪ್ರಜಾಪ್ರಭುತ್ವದಡಿಯಲ್ಲಿ ಕೇಂದ್ರ ಸರ್ಕಾರವು ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ ಎಂದರು.ಇದೇ ವೇಳೆ, ಎಫ್‌ಡಿಐ ಅಳವಡಿಸಿಕೊಳ್ಳುವ ಸಂಪೂರ್ಣ ನಿರ್ಧಾರವನ್ನು ಆಯಾ ರಾಜ್ಯಗಳಿಗೆ ಬಿಡಲಾಗಿದೆ. ಯಾವ ರಾಜ್ಯಗಳು ಎಫ್‌ಡಿಐ ಅಳವಡಿಸಿಕೊಳ್ಳಲು ಇಷ್ಟವಿಲ್ಲವೋ ಅಂತಹ ರಾಜ್ಯಗಳ ನಿರ್ಧಾರವನ್ನು ಕೇಂದ್ರ ಸರ್ಕಾರ ಗೌರವಿಸುತ್ತದೆ. ಅದೇ ರೀತಿ ಯಾವ ರಾಜ್ಯಗಳು ಎಫ್‌ಡಿಐ ಅಳವಡಿಸಿಕೊಳ್ಳಲು ಇಚ್ಛಿಸುತ್ತವೋ ಅಂತಹ  ರಾಜ್ಯಗಳ ಹಕ್ನನ್ನು ಕೂಡ ಗೌರವಿಸುತ್ತದೆ ಎಂದು ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry