ಎಫ್‌ಡಿಐ: ಭಾರತದ ನಿರ್ಣಯಕ್ಕೆ ಸ್ವಾಗತ

7

ಎಫ್‌ಡಿಐ: ಭಾರತದ ನಿರ್ಣಯಕ್ಕೆ ಸ್ವಾಗತ

Published:
Updated:

ವಾಷಿಂಗ್ಟನ್ (ಪಿಟಿಐ): ಬಹುಬ್ರಾಂಡ್ ಚಿಲ್ಲರೆ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಅವಕಾಶ ನೀಡುವ ಸಂಬಂಧ ಭಾರತದ ಸಂಸತ್ತು ಕೈಗೊಂಡಿರುವ ನಿರ್ಧಾರವನ್ನು ಅಮೆರಿಕ ಸ್ವಾಗತಿಸಿದೆ.ಭಾರತದ ಈ ನಿರ್ಧಾರವು ಉಭಯ ರಾಷ್ಟ್ರಗಳ ನಡುವಿನ ಆರ್ಥಿಕ ಸಹಕಾರವನ್ನು ಮತ್ತಷ್ಟು ಬಲಗೊಳಿಸಲಿದೆ ಎಂದು ಅಮೆರಿಕ ಬಣ್ಣಿಸಿದೆ.

`ಭಾರತದ ಸಂಸತ್ತಿನ ನಿರ್ಧಾರವನ್ನು ನಾವು ಸ್ವಾಗತ್ತೀಸುತ್ತೇವೆ' ಎಂದು ವಿದೇಶಾಂಗ ಇಲಾಖೆ ವಕ್ತಾರ ಮಾರ್ಕ್ ಟೋನರ್ ಹೇಳಿದ್ದಾರೆ.`ಭಾರತೀಯ ಅಧಿಕಾರಿಗಳು ಹೇಳಿರುವಂತೆ ಎಫ್‌ಡಿಐಯು ಸಣ್ಣ ಉದ್ಯಮಕ್ಕೆ, ರೈತರಿಗೆ ಹೆಚ್ಚು ಅವಕಾಶ ಕಲ್ಪಿಸಲಿದೆ. ಮೂಲ ಸೌಕರ್ಯ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ಮತ್ತಷ್ಟು ಉತ್ತೇಜನ ನೀಡಲಿದೆ. ಗ್ರಾಹಕರಿಗೂ ಇದರಿಂದ ಪ್ರಯೋಜನವಾಗಲಿದೆ. ಆಹಾರ ಪದಾರ್ಥಗಳು ಬೆಲೆಯೂ ಇಳಿಯಲಿದೆ' ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry