ಬುಧವಾರ, ನವೆಂಬರ್ 13, 2019
25 °C

`ಎಫ್‌ಡಿಐ' ಮಾರ್ಗಸೂಚಿ

Published:
Updated:

ನವದೆಹಲಿ (ಪಿಟಿಐ): ದೇಶದ ಬಹುಬ್ರಾಂಡ್ ಚಿಲ್ಲರೆ ವಹಿವಾಟಿನಲ್ಲಿ ಪಾಕಿಸ್ತಾನದ ಕಂಪೆನಿಗಳಿಗೆ ಹೂಡಿಕೆ ಮಾಡಲು ಅವಕಾಶ ಕಲ್ಪಿಸುವುದೂ ಸೇರಿದಂತೆ ಹಲವು ಸಡಿಲಿಕೆಗಳನ್ನು ತಂದು ಪರಿಷ್ಕೃತ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಮಾರ್ಗಸೂಚಿಯನ್ನು ಸರ್ಕಾರ ಶನಿವಾರ  ಪ್ರಕಟಿಸಿದೆ.ಪರಿಷ್ಕೃತ ನಿಯಮಗಳು ಏಪ್ರಿಲ್ 15ರಿಂದ ಜಾರಿಗೆ ಬರಲಿವೆ. ಹೆಚ್ಚಿನ ವಿದೇಶಿ ಹೂಡಿಕೆ ಆಕರ್ಷಿಸಲು ಏಕ ಬ್ರಾಂಡ್ ಚಿಲ್ಲರೆ ವಹಿವಾಟಿನ ನಿಯಮಗಳಲ್ಲೂ ಸ್ವಲ್ಪ ಮಟ್ಟಿಗಿನ ಸಡಿಲಿಕೆ ತರಲಾಗಿದೆ. ವಿದ್ಯುತ್, ನಾಗರಿಕ ವಿಮಾನಯಾನ, ಪ್ರಸಾರ ಸೇವೆ ಮತ್ತು ಬ್ಯಾಂಕೇತರ ಹಣಕಾಸು ವಲಯಗಳಲ್ಲಿ  ಹೂಡಿಕೆಗೆಇದ್ದ ನಿರ್ಬಂಧಗಳನ್ನು   ತಗ್ಗಿಸಲಾಗಿದೆ. ಕಳೆದ ವರ್ಷ ಸರ್ಕಾರ ಬಹು ಬ್ರಾಂಡ್ ಚಿಲ್ಲರೆ ವಹಿವಾಟಿನಲ್ಲಿ ಶೇ 51ರಷ್ಟು `ಎಫ್‌ಡಿಐ'ಗೆ ಅವಕಾಶ ನೀಡಿತ್ತು. ಇದೀಗ  ಪರಿಷ್ಕೃತ ಮಾರ್ಗಸೂಚಿ ಅನ್ವಯ  ವಿದೇಶಿ ಕಂಪೆನಿಗಳು ದೇಶದ ವಿದ್ಯುತ್ ವಲಯದಲ್ಲಿ  ಶೇ 49ರಷ್ಟು ಹೂಡಿಕೆ ಮಾಡಬಹುದಾಗಿದೆ. 

ಪ್ರತಿಕ್ರಿಯಿಸಿ (+)