ಎಫ್‌ಡಿಐ: ವಿರೋಧ

ಮಂಗಳವಾರ, ಜೂಲೈ 23, 2019
20 °C

ಎಫ್‌ಡಿಐ: ವಿರೋಧ

Published:
Updated:

ನವದೆಹಲಿ (ಪಿಟಿಐ): ರಕ್ಷಣೆ, ಬಾಹ್ಯಾಕಾಶ, ನಾಗರಿಕ ವಿಮಾನಯಾನ ಮತ್ತು ದೂರವಾಣಿ ವಲಯಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಮಿತಿಯನ್ನು ಹೆಚ್ಚಿಸುವುದಕ್ಕೆ ಸಂಬಂಧಿಸಿದಂತೆ ಗೃಹ ಸಚಿವಾಲಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.`ಎಫ್‌ಡಿಐ' ಮಿತಿ ಹೆಚ್ಚಿಸಿದರೆ ಚೀನಾ, ಪಾಕಿಸ್ತಾನ, ಇಂಡೋನೇಷಿಯಾ, ಸೌದಿ ಅರೇಬಿಯಾ ಮತ್ತಿತರ ದೇಶಗಳಿಂದ ಈ ವಲಯಗಳಿಗೆ ಹೆಚ್ಚಿನ ಬಂಡವಾಳ ಹರಿದು ಬರುತ್ತದೆ.

ದೇಶದ ಭದ್ರತೆಗೆ ಇದು ಅಪಾಯಕಾರಿ.ಇದಕ್ಕೆಅವಕಾಶ ನೀಡಬಾರದು ಎಂದು  ಗೃಹ ಇಲಾಖೆ ಕೈಗಾರಿಕಾ ನೀತಿ ಮತ್ತು ಉತ್ತೇಜನಾ ಇಲಾಖೆಗೆ (ಡಿಐಪಿಪಿ) ಬರೆದಿರುವ ಪತ್ರದಲ್ಲಿ ವಿವರಿಸಿದೆ.ರಕ್ಷಣೆ, ಬಾಹ್ಯಾಕಾಶ, ನಾಗರಿಕ ವಿಮಾನಯಾನ ಮತ್ತು ದೂರವಾಣಿ ವಲಯಗಳಲ್ಲಿ  ವಿದೇಶಿ ನೇರ ಹೂಡಿಕೆಗೆ   ಗೃಹ ಇಲಾಖೆಯಿಂದ ಪರವಾನಗಿ ಪಡೆದುಕೊಳ್ಳುವುದು ಕಡ್ಡಾಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry