ಎಫ್‌ಡಿಐ ಸೆಳೆಯಲು ಮನಮೋಹನ್ ಒಲವು

7

ಎಫ್‌ಡಿಐ ಸೆಳೆಯಲು ಮನಮೋಹನ್ ಒಲವು

Published:
Updated:

ನವದೆಹಲಿ (ಪಿಟಿಐ): ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ)ಗೆ ಬಹು-ಉದ್ದೇಶಿತ ಚಿಲ್ಲರೆ ವ್ಯಾಪಾರವನ್ನು ಮುಕ್ತವಾಗಿಸುವ ಮತ್ತು ರಕ್ಷಣೆಯಂತಹ ಇತರ ಕ್ಷೇತ್ರಗಳ ಆಡಳಿತವನ್ನು ಉದಾರೀಕರಣಗೊಳಿಸುವ ಬೇಡಿಕೆಗಳ ಹಿನ್ನೆಲೆಯಲ್ಲಿ ಬುಧವಾರ ಇಲ್ಲಿ ಪ್ರತಿಕ್ರಿಯಿಸಿರುವ ಪ್ರಧಾನಿ ಮನಮೋಹನ್ ಸಿಂಗ್, ‘ವಿದೇಶದಿಂದ ಬಂಡವಾಳ ಹರಿದು ಬರುವಂತಹ ಅನುಕೂಲಕರ ಪರಿಸರವನ್ನು ದೇಶದಲ್ಲಿ ನಿರ್ಮಾಣ ಮಾಡುವ ಅವಶ್ಯಕತೆ ಇದೆ’ ಎಂದು ನುಡಿದರು. ವಿದೇಶದಿಂದ ಅಪಾರ ಹಣ ಹರಿದು ಬರುವಂತಹ ಅನುಕೂಲಕರ ವಾತಾವರಣ ನಿರ್ಮಾಣಕ್ಕಾಗಿ ಪರಿವರ್ತನೆಯ ಮಾರ್ಗಗಳನ್ನು ಬಲಪಡಿಸುವ ಅಗತ್ಯವಿದೆ ಎಂದರು. ಪ್ರಸಕ್ತ ಅಂತರರಾಷ್ಟ್ರೀಯ ಸನ್ನಿವೇಶದಲ್ಲಿ ಹೊರಹೊಮ್ಮುತ್ತಿರುವ ಹೊಸ ಮಾರುಕಟ್ಟೆಯಿಂದ ವಿದೇಶಿ ಹಣವನ್ನು ಹೊರಗೆ ಹರಿಸುತ್ತಿರುವುದರಿಂದ ಎಫ್‌ಡಿಐನಲ್ಲಿನ ಕುಸಿತಕ್ಕೆ ಸರ್ಕಾರದ ನೀತಿಗಳನ್ನು ಹೊಣೆಯಾಗಿಸಿ ದೂಷಿಸಲಾಗದು’ ಎಂದರು.‘ಹೊರದೇಶಗಳಲ್ಲಿ ಉಂಟಾಗುವ ತೊಂದರೆಗಳು ನಮ್ಮ ದೇಶದ ಮೇಲೂ ಪರಿಣಾಮ ಬೀರುವಂತಹ ಪರಿಸ್ಥಿತಿಯಲ್ಲಿ ನಾವು ಈಗ ಇದ್ದು ಅಂತರರಾಷ್ಟ್ರೀಯ ಪರಿಸ್ಥಿತಿಯೇ ಹೊಸ ಮಾರುಕಟ್ಟೆಗಳಲ್ಲಿ ಹಣ ಹೂಡಿಕೆ ಕುಸಿಯಲು ಕಾರಣವಾಗಿವೆ’ ಎಂದು ಅವರು ಅಭಿಪ್ರಾಯಪಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry