ಸೋಮವಾರ, ಜೂನ್ 21, 2021
30 °C

ಎಫ್‌ಡಿಐ: ಸ್ಪಷ್ಟ ಒಮ್ಮತಕ್ಕೆ ಪ್ರಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ):  ಚಿಲ್ಲರೆ ಮಾರಾಟದಲ್ಲಿ ಶೇಕಡಾ 51ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಕುರಿತಂತೆ ಸ್ಪಷ್ಟವಾದ ಒಮ್ಮತ  ಮೂಡಿಸಲು ಸಮಾಲೋಚನೆ ಮುಂದುವರಿದಿದೆ ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಶುಕ್ರವಾರ ಮಂಡಿಸಿದ ಬಜೆಟ್‌ನಲ್ಲಿ ಹೇಳಿದ್ದಾರೆ.

ವಾಯು ಸಾರಿಗೆ ವಲಯದಲ್ಲಿ ಶೇ 49ರಷ್ಟು ವಿದೇಶಿ ಬಂಡವಾಳ ಆಕರ್ಷಣೆಗೆ ಅವಕಾಶ ನೀಡುವ ಬಗ್ಗೆ ತೀವ್ರ ಪರಿಶೀಲನೆ ನಡೆಸಲಾಗುತ್ತಿದೆ ಎಂದೂ ಹಣಕಾಸು ಸಚಿವರು ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಬಹು ಬ್ರ್ಯಾಂಡ್ ಚಿಲ್ಲರೆ ಮಾರಾಟದಲ್ಲಿ ಎಫ್‌ಡಿಐ ಆಕರ್ಷಿಸುವ ನಿರ್ಧಾರಕ್ಕೆ ರಾಜಕೀಯ ಪಕ್ಷಗಳು, ವಿವಿಧ ರಾಜ್ಯಗಳು, ವಾಣಿಜ್ಯ- ವ್ಯಾಪಾರ ಮತ್ತು ಉದ್ದಿಮೆ ವಲಯ, ಕೃಷಿಕರ ಮತ್ತು ಗ್ರಾಹಕರ ಸಂಘಟನೆಗಳು ಮತ್ತಿತರ ಕಡೆಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿದ್ದರಿಂದ ಇದರ ಜಾರಿಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.