`ಎಫ್‌ಡಿಐ' ಸ್ವಾಗತಕ್ಕೆ ನವದೆಹಲಿ ಸಜ್ಜು

7

`ಎಫ್‌ಡಿಐ' ಸ್ವಾಗತಕ್ಕೆ ನವದೆಹಲಿ ಸಜ್ಜು

Published:
Updated:

ನವದೆಹಲಿ(ಪಿಟಿಐ): ಬಹುಬಗೆ ಬ್ರಾಂಡ್ ಚಿಲ್ಲರೆ ವಹಿವಾಟು ಕ್ಷೇತ್ರದಲ್ಲಿ ಶೇ 51ರಷ್ಟು `ನೇರ ವಿದೇಶಿ ಹೂಡಿಕೆ'(ಎಫ್‌ಡಿಐ) ಸ್ವಾಗತಕ್ಕೆ ನವದೆಹಲಿ ಆಗಲೇ ಪೂರ್ಣ ಸಜ್ಜಾಗಿದೆ. ಆ ಮೂಲಕ ಚಿಲ್ಲರೆ ವಹಿವಾಟು ಕ್ಷೇತ್ರದ ಬೃಹತ್ ಸಂಸ್ಥೆಗಳಾದ `ವಾಲ್‌ಮಾರ್ಟ್' ಮತ್ತು `ಟೆಸ್ಕೊ'ಗೆ ರತ್ನಗಂಬಳಿ ಹಾಸಿ ಬರಮಾಡಿಕೊಂಡ ದೇಶದ ಮೊದಲ ನಗರ ಎನಿಸಿಕೊಳ್ಳಲಿದೆ.`ಎಫ್‌ಡಿಐ' ಪ್ರಸ್ತಾವನೆಗೆ ಸಂಸತ್ತಿನ ಎರಡೂ ಸದನಗಳಲ್ಲಿ ಚಳಿಗಾಲದ ಅಧಿವೇಷನದಲ್ಲಿ ಅನುಮೋದನೆ ದೊರೆತ ಬೆನ್ನಲ್ಲೇ ರಾಜಧಾನಿಯಲ್ಲಿನ ಕಾಂಗ್ರೆಸ್ ಆಡಳಿತ, ಮಸೂದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಮುಂದಾಗಿದೆ. ಈ ನಿಟ್ಟಿನಲ್ಲಿ `ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ'(ಎಪಿಎಂಸಿ) ನಿಯಮಗಳಿಗೆ ತಿದ್ದುಪಡಿ ತರಲೂ ಅಗತ್ಯ ಸಿದ್ಧತೆ ಮಾಡಿಕೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry