ಶನಿವಾರ, ಮೇ 21, 2022
24 °C

ಎಫ್‌ಬಿಐ ವಶದಲ್ಲಿ ರಜತ್ ಗುಪ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್, (ಪಿಟಿಐ): ರಹಸ್ಯ ಮಾಹಿತಿ ಸೋರಿಕೆ ಆರೋಪದ ಮೇಲೆ ಗೋಲ್ಡ್‌ಮನ್ ಸ್ಯಾಚೆ ಮಾಜಿ ನಿರ್ದೇಶಕ ರಜತ್ ಗುಪ್ತ ಅವರು ಬುಧವಾರ ಎಫ್‌ಬಿಐ ಅಧಿಕಾರಿಗಳ ಮುಂದೆ ಶರಣಗಾಗಿದ್ದಾರೆ.`ಗುಪ್ತ, ಮ್ಯಾನ್‌ಹಟನ್‌ನಲ್ಲಿರುವ ಎಫ್‌ಬಿಐಗೆ ಕಚೇರಿಗೆ ಬುಧವಾರ ಬೆಳಿಗ್ಗೆ 8 ಗಂಟೆಗೆ ಆಗಮಿಸಿದ್ದು, ಪ್ರಸ್ತುತ ಅವರು ಎಫ್‌ಬಿಐ ವಶದಲ್ಲಿ ಇದ್ದಾರೆ~ ಎಂದು ಮೂಲಗಳು ತಿಳಿಸಿವೆ.ಗೋಲ್ಡ್‌ಮನ್ ಸ್ಯಾಚೆ, ಪ್ರಾಕ್ಟರ್ ಆ್ಯಂಡ್ ಗ್ಯಾಂಬಲ್‌ನ ಮಾಜಿ  ನಿರ್ದೇಶಕ ಗುಪ್ತ (62) ತಮ್ಮ ಅಧಿಕಾರದ ವೇಳೆ ಕಂಪೆನಿಯ ರಹಸ್ಯ ಮಾಹಿತಿಯನ್ನು ತನ್ನ ಸ್ನೇಹಿತ ಶ್ರೀಲಂಕಾದ ರಾಜರತ್ನಂಗೆ ನೀಡಿದ್ದರು ಎನ್ನಲಾಗಿದೆ.ರಾಜರತ್ನಂ ಇದರ ಪ್ರಯೋಜನವನ್ನು ಪಡೆದು ಭಾರಿ ಲಾಭಗಳಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜರತ್ನಂ ವಿರುದ್ಧ ಮಾರ್ಚ್ ತಿಂಗಳಲ್ಲಿ ವಿಚಾರಣೆ ನಡೆಸಿ 11 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಅಂದಿನಿಂದ ಅಧಿಕಾರಿಗಳು ಗುಪ್ತಾ ಅವರ ಮೇಲೆ ಕಣ್ಣಿಟ್ಟಿದ್ದರು.ಆದರೆ ತನ್ನ ಕಕ್ಷಿದಾರರಾಗಿರುವ ಗುಪ್ತಾ ನಿರ್ದೋಷಿ ಎಂದು ವಕೀಲರಾದ ಗ್ಯಾರಿ ನಫ್ತಾಲಿಸ್ ತಿಳಿಸಿದ್ದಾರೆ.

ಗೋಲ್ಡ್‌ಮನ್ ಸ್ಯಾಚೆನಲ್ಲಿ ವಾರನ್ ಬಫೆಟ್ ಅವರು ಐದು ಬಿಲಿಯನ್ ಡಾಲರ್ ಬಂಡವಾಳ ಹೂಡಿದ್ದ ಮಾಹಿತಿಯನ್ನು ಗುಪ್ತಾ, ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ರಾಜರತ್ನಂಗೆ ನೀಡಿದ್ದರು ಎಂದೂ ಆಪಾದಿಸಲಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.