ಎಬಿವಿಪಿ ಕಾರ್ಯಕರ್ತರ ಪ್ರತಿಭಟನೆ

7
ಸಿಇಟಿ ಬಿಕ್ಕಟ್ಟು ಶಾಶ್ವತ ಪರಿಹಾರಕ್ಕೆ ಒತ್ತಾಯ

ಎಬಿವಿಪಿ ಕಾರ್ಯಕರ್ತರ ಪ್ರತಿಭಟನೆ

Published:
Updated:

ಹಾವೇರಿ: ಸಿಇಟಿ ಬಿಕ್ಕಟ್ಟು ಶಾಶ್ವತವಾಗಿ ಪರಿಹರಿಸಲು ಸರ್ಕಾರ ಮುಂದಾಗ-­ಬೇಕು ಎಂದು ಒತ್ತಾಯಿಸಿ ಅಖಿಲ ಭಾರ­ತೀಯ ವಿದ್ಯಾರ್ಥಿ ಪರಿಷತ್ ನಗರ ಶಾಖೆಯ ವಿದ್ಯಾರ್ಥಿಗಳು ಸೋಮ­ವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ನಗರದ ಜೆ.ಎಚ್. ಪಟೇಲ್ ವೃತ್ತ­ದಿಂದ ಆರಂಭವಾದ ಪ್ರತಿಭಟನಾ ಮೆರ­­­ವ­ಣಿಗೆ ನಗರದ ಪ್ರಮುಖ ಬೀದಿ­ಗಳಲ್ಲಿ ಸಂಚರಿಸಿ ಹೊಸಮನಿ ಸಿದ್ದಪ್ಪ ವೃತ್ತಕ್ಕೆ ಆಗಮಿತು.

ಇಲ್ಲಿ ಕೆಲ ಹೊತ್ತು ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರು ನಂತರ ತಹಶೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಎಬಿವಿಪಿ ಜಿಲ್ಲಾ ಸಂಘಟನಾ ಕಾರ್ಯ­ದರ್ಶಿ ಸಿದ್ದು ಮದರಖಂಡಿ ಮಾತ­ನಾಡಿ, ವೃತ್ತಿ ಶಿಕ್ಷಣ ಪಡೆಯ­ಬೇಕು ಎಂದು ವಿದ್ಯಾರ್ಥಿಗಳಿಗೆ ಶೇಕಡಾ ೫೦:೫೦ ಸೀಟು ಹಂಚಿಕೆ ಅನುಪಾತ­ವನ್ನು ಜಾರಿಗೊಳಿಸಬೇಕು.

ಶೇ.೫೦ ಸೀಟುಗಳಿಗೆ ಸರ್ಕಾರ ವಿದ್ಯಾರ್ಥಿಗಳು ಭರಿಸಬಹುದಾದ ಕಡಿಮೆ ಶುಲ್ಕವನ್ನು ನಿರ್ಧರಿಸಬೇಕು. ಶೇ.೫೦ ಸೀಟು ಆಡ­ಳಿತ ಮಂಡಳಿ ಸೀಟುಗಳಿಗೆ ಹೆಚ್ಚುವರಿ ಶುಲ್ಕವನ್ನು ನಿರ್ಧಾರ ಮಾಡಬೇಕು. ಸರ್ಕಾರದ ಪ್ರತಿಶತ ೧೦೦ ಸೀಟುಗಳನ್ನು ಸರ್ಕಾರ ಕೇಂದ್ರಿಯ ಪ್ರವೇಶ ನೀತಿಯ ಮೂಲಕ ಹಾಗೂ ಏಕಗವಾಕ್ಷಿಯ ಮೂಲಕ ಪ್ರವೇಶಾತಿ ನೀಡಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ತಾಲ್ಲೂಕು ಸಂಚಾ­ಲಕ ನಾಗರಾಜ್ ಹುಳ್ಳಿಕುಪ್ಪಿ, ಕಿರಣ ಕೊಣ್ಣನವರ, ಪವನ ತಳವಾರ, ಸಂಜು ಕೋರವಾರ, ಹರೀಶ ಕೊರವರ, ನಾಗ­ರಾಜ ಹಾವೇರಿ, ಯಶವಂತ್ ಹಾಗೂ ಸರ್ಕಾರಿ ಪಿ.ಯು. ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡ್ಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry