ಗುರುವಾರ , ಆಗಸ್ಟ್ 22, 2019
22 °C

ಎರಡನೇಯ ದಿನಕ್ಕೆ ಕಾಲಿಟ್ಟ ಪ್ರತಿಭಟನೆ

Published:
Updated:

ಹೈದರಾಬಾದ್ (ಪಿಟಿಐ): ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆ ವಿರೋಧಿಸಿ ರಾಯಲಸೀಮೆ ಮತ್ತು ಆಂಧ್ರ ಕರಾವಳಿ ಭಾಗಗಳಲ್ಲಿ ನಡೆಸುತ್ತಿರುವ ಪ್ರತಿಭಟನೆಗಳು ಗುರುವಾರ ಎರಡನೇಯ ದಿನಕ್ಕೆ ಕಾಲಿಟ್ಟಿದ್ದು, ಅಖಂಡ ಆಂಧ್ರ ಬೆಂಬಲಿಗರು ರ್‍ಯಾಲಿಗಳನ್ನು ನಡೆಸಿ, ಬಸ್‌ಗಳ ಸಂಚಾರಕ್ಕೆ ತಡೆಯೊಡ್ಡಿದ್ದಾರೆ.ಕೃಷ್ಣಾ, ಪಶ್ಚಿಮ ಗೋದಾವರಿ, ವಿಶಾಖಪಟ್ಟಣ, ಕಡಪಾ ಮತ್ತು ಅನಂತಪುರ ಜಿಲ್ಲೆಗಳಲ್ಲಿ ಪ್ರತಿಭಟನೆಗಳು ಮುಂದುವರಿದಿವೆ.ಇದೇ ವೇಳೆ ಆಂಧ್ರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ವಿಶಾಖಪಟ್ಟಣದಲ್ಲಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹವು ಗುರುವಾರಕ್ಕೆ ಮೂರನೇಯ ದಿನಕ್ಕೆ ಕಾಲಿಟ್ಟಿದ್ದು, ವಿಶಾಖಪಟ್ಟಣ ಸೇರಿದಂತೆ ಇತರೆ ಜಿಲ್ಲೆಗಳ ವಕೀಲರು ಪ್ರತಿಭಟನೆ ಬೆಂಬಲಿಸಿ 72 ಗಂಟೆಗಳ ಕಾಲ ಕಲಾಪ ಬಹಿಷ್ಕರಿಸಿದ್ದಾರೆ.ಹಲವಾರು ನಗರಗಳಲ್ಲಿ ಶಿಕ್ಷಣ ಸಂಸ್ಥೆಗಳು ಹಾಗೂ ವ್ಯಾಪಾರ ವಹಿವಾಟುಗಳು ಬಂದ್ ಮಾಡಲಾಗಿದೆ. ಪರಿಸ್ಥಿತಿ ಶಾಂತಪೂರ್ಣವಾಗಿದ್ದು, ಇವರೆಗೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Post Comments (+)