ಎರಡನೇ ಅವಧಿಗೂ ಅರ್ಹ: ಒಬಾಮ

7

ಎರಡನೇ ಅವಧಿಗೂ ಅರ್ಹ: ಒಬಾಮ

Published:
Updated:

ವಾಷಿಂಗ್ಟನ್ (ಪಿಟಿಐ):  ಎರಡು ವರ್ಷಗಳ ಹಿಂದೆ ಹದಗೆಟ್ಟಿದ್ದ ಅಮೆರಿಕದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿದ ಹೆಮ್ಮೆಯಿಂದ ಬೀಗುತ್ತಿರುವ ಅಧ್ಯಕ್ಷ ಬರಾಕ್ ಒಬಾಮ ಎರಡನೇ ಅವಧಿಗೂ ಅಧ್ಯಕ್ಷರಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ.ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯ ಹಿನ್ನೆಲೆಯಲ್ಲಿ ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.ಎರಡು ವರ್ಷಗಳ ಹಿಂದೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ದೇಶದ ಪರಿಸ್ಥಿತಿಯಲ್ಲಿ ಕಂಡು ಬಂದಿರುವ ಚೇತರಿಕೆಯಿಂದ ಉತ್ತೇಜಿತರಾಗಿರುವ ಅವರು, ಮತ್ತೊಂದು ಅವಧಿಗೆ ಸ್ಪರ್ಧಿಸುವ ಅರ್ಹತೆ ಹೊಂದಿರುವುದಾಗಿ ಹೇಳಿದ್ದಾರೆ. ಎನ್‌ಬಿಸಿ ಸುದ್ದಿವಾಹಿನಿಗೆ ನೀಡಿರುವ ಸಂದರ್ಶನದ ಪ್ರಮುಖ ಭಾಗವನ್ನು ಸೋಮವಾರ ಪ್ರಸಾರ ಮಾಡಲಾಗಿದ್ದು, ಮಂಗಳವಾರ ಸಂಪೂರ್ಣ ಸಂದರ್ಶನ ಪ್ರಸಾರ ಆಗಲಿದೆ.ಹದಗೆಟ್ಟಿರುವ ದೇಶದ ಆರ್ಥಿಕ ಪರಿಸ್ಥಿತಿಯನ್ನು ಮೂರು ವರ್ಷಗಳಲ್ಲಿ ನಿಯಂತ್ರಿಸದಿದ್ದಲ್ಲಿ ಮುಂದಿನ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು 2009ರ ಆರ್ಥಿಕ ಹಿಂಜರಿತದ ವೇಳೆ ಒಬಾಮ ಹೇಳಿದ್ದರು. ಸಂದರ್ಶನದ ವೇಳೆ ಆ ಕುರಿತು ಪ್ರಸ್ತಾಪಿಸಿದಾಗ ಅವರು ತಮ್ಮ ಇಂಗಿತ ಬಿಚ್ಚಿಟ್ಟರು.`ಅಮೆರಿಕದ ಉತ್ಪಾದಕ ಶಕ್ತಿ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಸಾಗರೋತ್ತರ ವಹಿವಾಟಿನಲ್ಲಿಯೂ ವೃದ್ಧಿಯಾಗಿದೆ. ನಮ್ಮ ಕಾರ್ಮಿಕರು ವಿಶ್ವದಲ್ಲಿಯೇ ಅತ್ಯುತ್ತಮ ಕುಶಲ       ಕರ್ಮಿಗಳು ಎಂಬುವುದನ್ನು ಸಾಬೀತುಪಡಿಸಿದ್ದಾರೆ~ ಎಂದು ಒಬಾಮ ತಮ್ಮ ಸಾಧನೆ ಬಣ್ಣಿಸಿಕೊಂಡರು.ಇರಾನ್‌ನ ಅಣು ಸ್ಥಾವರಗಳ ಮೇಲಿನ ದಾಳಿ ಕುರಿತು ಇಸ್ರೇಲ್ ಇನ್ನೂ ಯಾವುದೇ ತೀರ್ಮಾನ ಮಾಡಿದಂತೆ ತೋರುತ್ತಿಲ್ಲ ಎಂದು ಅವರು ಇದೇ ವೇಳೆ ಅಭಿಪ್ರಾಯಪಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry