ಭಾನುವಾರ, ಜೂನ್ 20, 2021
20 °C

ಎರಡನೇ ವಿಧದ ಮಧುಮೇಹಕ್ಕೆ ಕಾರಣ:ನಿತ್ಯ ಅನ್ನ ಸೇವನೆ ಅಪಾಯಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ಅನ್ನ ಊಟಕ್ಕೆ ಹಿತಕರವಾಗಿದ್ದರೂ ಸಹ, ನಿರಂತರ ಸೇವನೆಯಿಂದ ಎರಡನೇ ಹಂತದ ಮಧುಮೇಹ ರೋಗಕ್ಕೆ ಕಾರಣವಾಗುತ್ತದೆ ಎಂದು ಅಧ್ಯಯನ ವೊಂದು ತಿಳಿಸಿದೆ.ಹಾರ್ವರ್ಡ್ ಸ್ಕೂಲ್‌ನ ತಜ್ಞರು ಏಷ್ಯಾದ ಜನರಲ್ಲಿ ಅನ್ನ ಸೇವನೆ ಮತ್ತು ಎರಡನೇ ಹಂತದ ಮಧುಮೇಹಕ್ಕೆ ಸಂಬಂಧ ಇರುವ ಕುರಿತು ಅಧ್ಯಯನ ನಡೆಸಿದ್ದಾರೆ ಎಂದು ಹೇಳಲಾಗಿದೆ.ಏಷ್ಯಾ ಖಂಡದಿಂದ ಚೀನಾ ಹಾಗೂ ಜಪಾನ್ ತಲಾ ಒಬ್ಬರು, ಅಮೆರಿಕ ಹಾಗೂ ಆಸ್ಟ್ರೇಲಿಯಾದ ತಲಾ ಒಬ್ಬರು ಆರೋಗ್ಯವಂತರನ್ನು ಪರೀಕ್ಷೆಗೆ ಒಳಪಡಿಸಿ ಅವರಿಗೆ ನಿತ್ಯ ಅನ್ನ ಸೇವನೆ ಪರೀಕ್ಷೆ ಮಾಡುವ ಮೂಲಕ ಅಧ್ಯಯನ ನಡೆಸಲಾಯಿತು ಎಂದು ಬ್ರಿಟಿಷ್ ಮೆಡಿಕಲ್ ಜರ್ನಲ್ ವರದಿ ಮಾಡಿದೆ.ನಿತ್ಯ ಅನ್ನ ಸೇವಿಸುವವರ ರಕ್ತದಲ್ಲಿ ಸಾಮಾನ್ಯವಾಗಿ ಸಕ್ಕರೆ ಪ್ರಮಾಣ ಹೆಚ್ಚಿರುತ್ತದೆ. ಅನ್ನ ಬೇಗ ಜೀರ್ಣವಾಗುವುದರ ಜತೆಗೆ ದೇಹಕ್ಕೆ ಅಧಿಕ ಪ್ರಮಾಣದಲ್ಲಿ ಸಕ್ಕರೆ ಅಂಶವನ್ನು ಒದಗಿಸುತ್ತದೆ.

ಹೀಗಾಗಿಯೇ ಎರಡನೇ ಹಂತದ ಮಧುಮೇಹಕ್ಕೆ ಇದು ಕಾರಣ ವಾಗುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.