ಭಾನುವಾರ, ನವೆಂಬರ್ 17, 2019
28 °C
ನ್ಯೂಜಿಲೆಂಡ್ ಓಪನ್ ಬ್ಯಾಡ್ಮಿಂಟನ್

ಎರಡನೇ ಸುತ್ತಿಗೆ ಅಜಯ್

Published:
Updated:

ಆಕ್ಲೆಂಡ್ (ಪಿಟಿಐ): ಅಜಯ್ ಜಯರಾಮನ್, ಆನಂದ್ ಪವಾರ್ ಸೇರಿದಂತೆ ಇನ್ನುಳಿದ ಭಾರತದ ಸ್ಪರ್ಧಿಗಳು ಇಲ್ಲಿ ಆರಂಭವಾದ ನ್ಯೂಜಿಲೆಂಡ್ ಬ್ಯಾಡ್ಮಿಂಟನ್ ಓಪನ್ ಟೂರ್ನಿಯ ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಶುಭಾರಂಭ ಮಾಡಿದ್ದಾರೆ.ಬುಧವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಜಯರಾಮನ್ 27 ನಿಮಿಷ ಹೋರಾಟ ನಡೆಸಿ 21-5, 22-20ರಲ್ಲಿ ಮಲೇಷ್ಯಾದ ವಿನ್ಸನ್ ನಿಯೊ ಎದುರು ಸುಲಭ ಗೆಲುವು ಪಡೆದರು. ಐದನೇ ಶ್ರೇಯಾಂಕದ ಆನಂದ್ ಪವಾರ್ 21-15, 21-19ರಲ್ಲಿ ಚೀನಾದ ಹೌವೇಯಿ ತಿಯಾನ್ ಎದುರು 39 ನಿಮಿಷ ಪೈಪೋಟಿ ನಡೆಸಿ ಗೆಲುವು ಸಾಧಿಸಿದರು.ನಾಲ್ಕನೇ ಶ್ರೇಯಾಂಕ ಹೊಂದಿರುವ ಗುರುಸಾಯಿದತ್ 21-15, 21-7ರಲ್ಲಿ ನ್ಯೂಜಿಲೆಂಡ್‌ನ ಚಾನ್ಸ್ ಚೇಂಗ್ ಮೇಲೂ, ಚೇತನ್ ಆನಂದ್ 21-10, 21-16ರಲ್ಲಿ ಆತಿಥೇಯ ದೇಶದ ಅಶಿರ್ ರಿಚರ್ಡ್‌ಸನ್ ಅವರನ್ನು ಮಣಿಸಿ ಎರಡನೇ ಸುತ್ತಿಗೆ ಮುನ್ನಡೆದರು. ಈ ಗೆಲುವು ಪಡೆಯಲು ಚೇತನ್ 23 ನಿಮಿಷ ಹೋರಾಟ ನಡೆಸಿದರು.ಭಾರತದ ಇನ್ನೊಬ್ಬ ಸ್ಪರ್ಧಿ ಅರವಿಂದ್ ಭಟ್ 21-10, 21-11ರಲ್ಲಿ ನ್ಯೂಜಿಲೆಂಡ್‌ನ ಟೋನಿ ಫಾಂಗ್ ಎದುರು ಕೇವಲ 20 ನಿಮಿಷದಲ್ಲಿ ಗೆಲುವು ದಾಖಲಿಸಿದರು. ಮಹಿಳಾ ವಿಭಾಗದ ಸಿಂಗಲ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿರುವ ಏಕೈಕ ಆಟಗಾರ್ತಿ ಶಾರದಾ ಜಸ್ತಿ ಅರ್ಹತಾ ಸುತ್ತಿನ ಪಂದ್ಯವನ್ನಾಡಲಿದ್ದಾರೆ.

ಪ್ರತಿಕ್ರಿಯಿಸಿ (+)