ಶನಿವಾರ, ಏಪ್ರಿಲ್ 17, 2021
31 °C

ಎರಡನೇ ಸುತ್ತಿಗೆ ದೀಪಿಕಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಂಕಾಂಗ್ (ಪಿಟಿಐ): ಆರಂಭಿಕ ಹಿನ್ನಡೆಯನ್ನು ಮೆಟ್ಟಿ ನಿಂತ ದೀಪಿಕಾ ಪಲ್ಲಿಕಲ್ ಇಲ್ಲಿ ನಡೆಯುತ್ತಿರುವ ಹಾಂಕಾಂಗ್ ಓಪನ್ ಸ್ಕ್ವಾಷ್ ಟೂರ್ನಿಯ ಎರಡನೇ ಸುತ್ತು ಪ್ರವೇಶಿಸಲು ಯಶಸ್ವಿಯಾದರು.

ಬುಧವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದ ಆಟಗಾರ್ತಿ 7-11, 11-6, 11-1, 11-5 ರಲ್ಲಿ ಸ್ಥಳೀಯ ಪ್ರತಿಭೆ ಲಿಯು ತ್ಸೆ ಲಿಂಗ್ ವಿರುದ್ಧ ಜಯ ಪಡೆದರು.

ಇಲ್ಲಿ 12ನೇ ಶ್ರೇಯಾಂಕ ಹೊಂದಿರುವ ದೀಪಿಕಾ ಮುಂದಿನ ಸುತ್ತಿನ ಪಂದ್ಯದಲ್ಲಿ ಇಂಗ್ಲೆಂಡ್‌ನ ಜೆನ್ನಿ ಡಂಕಾಫ್ ಅವರ ಸವಾಲನ್ನು ಎದುರಿಸುವರು.

ಆದರೆ ಪುರುಷರ ವಿಭಾಗದಲ್ಲಿ ಕಣದಲ್ಲಿದ್ದ ಭಾರತದ ಸಿದ್ಧಾರ್ಥ್ ಸಚ್‌ದೇ ಮೊದಲ ಸುತ್ತಿನಲ್ಲೇ ಮುಗ್ಗರಿಸಿದರು. ಆಸ್ಟ್ರೇಲಿಯಾದ ರ‌್ಯಾನ್ ಕ್ಯೂಸ್ಕೆಲಿ 11-6, 11-4, 11-4 ರಲ್ಲಿ ಸಿದ್ಧಾರ್ಥ್ ಅವರನ್ನು ಮಣಿಸಿದರು.

ಸಿದ್ಧಾರ್ಥ್ ಅರ್ಹತಾ ಹಂತದ ಪಂದ್ಯದಲ್ಲಿ 11-6, 11-2, 11-5 ರಲ್ಲಿ ಹಾಂಕಾಂಗ್‌ನ ಅಲೆಕ್ಸ್ ಲೌ ವಿರುದ್ಧ ಗೆಲುವು ಪಡೆದು ಪ್ರಧಾನ ಹಂತ ಪ್ರವೇಶಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.