ಎರಡನೇ ಸುತ್ತಿಗೆ ಬಾಗಲಕೋಟೆ, ದ.ಕ

7

ಎರಡನೇ ಸುತ್ತಿಗೆ ಬಾಗಲಕೋಟೆ, ದ.ಕ

Published:
Updated:
ಎರಡನೇ ಸುತ್ತಿಗೆ ಬಾಗಲಕೋಟೆ, ದ.ಕ

ಬಾಗಲಕೋಟೆ: ಆತಿಥೇಯ ಬಾಗಲಕೋಟೆ, ದಕ್ಷಿಣ ಕನ್ನಡ ಹಾಗೂ ಬಳ್ಳಾರಿ ಮತ್ತು ದಕ್ಷಿಣ ಕನ್ನಡ  ಶೈಕ್ಷಣಿಕ ಜಿಲ್ಲಾ ತಂಡಗಳು ನಗರದ ಬಸವೇಶ್ವರ ಕಾಲೇಜ್ ಮೈದಾನದಲ್ಲಿ ಶುಕ್ರವಾರ ಆರಂಭಗೊಂಡ ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಬಸವೇಶ್ವರ ಶಿಕ್ಷಣ ಸಂಸ್ಥೆ ಆಶ್ರಯದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಜ್ಯ ಹಾಕಿ ಟೂರ್ನಿಯಲ್ಲಿ ಕ್ರಮವಾಗಿ ಬಾಲಕರ ಹಾಗೂ ಬಾಲಕಿಯರ ವಿಭಾಗದ ಎರಡನೇ ಸುತ್ತಿಗೆ ಪ್ರವೇಶಿಸಿವೆ.ಮೊದಲ ದಿನದ ಎಲ್ಲ ಪಂದ್ಯಗಳೂ ಏಕಪಕ್ಷೀಯವಾಗಿದ್ದವು. ಬಾಲಕರ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ತಂಡ, ಹಾವೇರಿ ತಂಡವನ್ನು 12-0  ಗೋಲುಗಳಿಂದ ಮಣಿಸಿದರೆ,  ಬಾಗಲಕೋಟೆ 9-0 ರಲ್ಲಿ  ದಾವಣಗೆರೆ ತಂಡವನ್ನು ಸೋಲಿಸಿತು.ಇತರ ಪಂದ್ಯಗಳಲ್ಲಿ ಬಳ್ಳಾರಿ 6-0 ರಲ್ಲಿ ಚಿಕ್ಕಮಗಳೂರು ವಿರುದ್ಧವೂ, ಹಾಸನ 8-0 ರಲ್ಲಿ ಗುಲಬರ್ಗ ಎದುರೂ, ಬೆಂಗಳೂರು ಗ್ರಾಮಾಂತರ ತಂಡ 5-1 ರಲ್ಲಿ ಮಂಡ್ಯ ಮೇಲೂ, ಕೊಡಗು 3-0 ರಲ್ಲಿ ಗದಗ ವಿರುದ್ಧವೂ, ಧಾರವಾಡ 5-0 ರಲ್ಲಿ ಮೈಸೂರು ಮೇಲೂ, ಮಂಡ್ಯ 3-0 ರಲ್ಲಿ ವಿಜಾಪುರ ವಿರುದ್ಧವೂ, ಬೀದರ್ 2-0 ರಲ್ಲಿ ಬೆಂಗಳೂು ಎದುರೂ ಜಯ ಪಡೆದವು.ಬಾಲಕಿಯರ ವಿಭಾಗದಲ್ಲಿ ಬಳ್ಳಾರಿ 10-0 ರಲ್ಲಿ ಮಂಡ್ಯ ತಂಡವನ್ನು ಸೋಲಿಸಿದರೆ, ದಾವಣಗೆರೆ ಏಕೈಕ ಗೋಲಿನಿಂದ ಹಾಸನ ವಿರುದ್ಧ ಜಯ ಪಡೆಯಿತು.ಇತರ ಪಂದ್ಯಗಳಲ್ಲಿ ಮೈಸೂರು 8-0 ರಲ್ಲಿ ವಿಜಾಪುರ ಎದುರೂ, ಬಾಗಲಕೋಟೆ 6-0 ರಲ್ಲಿ ಕೋಲಾರ ಮೇಲೂ, ದಕ್ಷಿಣ ಕನ್ನಡ 7-0 ರಲ್ಲಿ ಬೆಂಗಳೂರ ಉತ್ತರ ತಂಡದ ವಿರುದ್ಧವೂ, ಉಡುಪಿ 4-0 ರಲ್ಲಿ ತುಮಕೂರು ಮೇಲೂ, ಕೊಡಗು 2-0 ರಲ್ಲಿ ಬೆಂಗಳೂರು ದಕ್ಷಿಣ ಎದುರೂ, ಬಳ್ಳಾರಿ 7-0 ರಲ್ಲಿ ದಾವಣಗೆರೆ ಎದುರೂ, ಮೈಸೂರು 4-0 ರಲ್ಲಿ ದಕ್ಷಿಣ ಕನ್ನಡ ವಿರುದ್ಧವೂ, ಬಾಗಲಕೋಟೆ 2-ರಲ್ಲಿ ಉಡುಪಿ ಮೇಲೂ ಜಯ ಪಡೆದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry