ಎರಡನೇ ಸುತ್ತಿಗೆ ಸಿಂಧು, ಶ್ರೀಕಾಂತ್

ಪೆನಾಂಗ್ (ಪಿಟಿಐ): ಪಿ.ವಿ ಸಿಂಧು, ಕೆ.ಶ್ರೀಕಾಂತ್ ಸೇರಿದಂತೆ ಭಾರತದ ಎಲ್ಲಾ ಆಟಗಾರರು ಬುಧವಾರ ಇಲ್ಲಿ ಆರಂಭ ವಾದ ಮಲೇಷ್ಯಾ ಮಾಸ್ಟರ್ಸ್ ಗ್ರ್ಯಾಂಡ್ ಪ್ರೀ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿ ಯಲ್ಲಿ ಶುಭಾರಂಭ ಮಾಡಿದ್ದಾರೆ.
ಮಹಿಳೆಯರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಹಣಾಹಣಿಯಲ್ಲಿ ಮೂರನೇ ಶ್ರೇಯಾಂಕದ ಭರವಸೆಯ ಆಟಗಾರ್ತಿ ಪಿ.ವಿ ಸಿಂಧು 21–17, 21–16ರಲ್ಲಿ ನೇರ ಗೇಮ್ಗಳಿಂದ ಸ್ವಿಟ್ಜರ್ ಲೆಂಡ್ನ ಸರ್ಬಿನಾ ಜಾಕೆಟ್ ಅವರನ್ನು ಮಣಿಸಿ ಎರಡನೇ ಸುತ್ತಿಗೆ ಲಗ್ಗೆಯಿಟ್ಟರು.
33 ನಿಮಿಷದ ಹೋರಾಟದಲ್ಲಿ ಸಿಂಧು ಅಮೋಘ ಸ್ಮ್ಯಾಷ್ ಮತ್ತು ರಿಟರ್ನ್ಸ್ಗಳ ಮೂಲಕ ಎದುರಾಳಿಯನ್ನು ತಬ್ಬಿಬ್ಬುಗೊಳಿಸಿದರು. ನಿಖರ ಹೊಡೆತ ಗಳಿಂದ ಗಮನಸೆಳೆದ ಭಾರತದ ಆಟ ಗಾರ್ತಿ ಸುಲಭವಾಗಿ ಪಂದ್ಯ ಗೆದ್ದುಕೊಂಡರು.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ 2014ರಲ್ಲಿ ಚೀನಾ ಓಪನ್ ಗೆದ್ದುಕೊಂಡಿದ್ದ ಶ್ರೀಕಾಂತ್ 21–17, 21–11ರಲ್ಲಿ ಮಲೇಷ್ಯಾದ ವಿ ಫೆಂಗ್ ಚಾಂಗ್ ಅವರನ್ನು ಮಣಿಸಿದರು.
10ನೇ ಶ್ರೇಯಾಂಕದ ಅಜಯ್ ಜಯರಾಮ್ 21–19, 21–11ರಲ್ಲಿ ಜಪಾನ್ನ ತಕುಮಾ ಉಯೇದಾ ಎದುರು ಗೆದ್ದರು.
ಟಾಟಾ ಓಪನ್ನಲ್ಲಿ ಜಯಗಳಿಸಿ ಭರವಸೆ ಮೂಡಿಸಿದ್ದ ಸಮೀರ್ ವರ್ಮಾ 21–18, 21–18ರಲ್ಲಿ ಜಪಾನ್ನ 12ನೇ ಶ್ರೇಯಾಂಕದ ಆಟಗಾರ ಶೊ ಸಸಾಕಿಗೆ ಆಘಾತ ನೀಡಿದರು.
ಸಾಯಿ ಪ್ರಣೀತ್ 21–13, 21–15ರಲ್ಲಿ ಮಲೇಷ್ಯಾದ ಶಹಜಾನ್ ಶಾ ಮಿಸ್ಪಹುಲ್ ಎದುರು ಗೆದ್ದರು.
ಯುವ ಆಟಗಾರ ಶುಭಾಂಕರ್ ಡೇ 21–19, 21–16ರಲ್ಲಿ ಥಾಯ್ಲೆಂಡ್ನ ಕಂಟಪೂನ್ ವಾಂಗ್ಚರಣ್ ವಿರುದ್ಧ ಶುಭಾರಂಭ ಮಾಡಿದರು.
ಜ್ವಾಲಾ–ಅಶ್ವಿನಿ ಜೋಡಿಗೆ ಜಯ: ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಭಾರತದ ಭರವಸೆಯ ಜೋಡಿ ಅಶ್ವಿನಿ ಪೊನ್ನಪ್ಪ ಹಾಗೂ ಜ್ವಾಲಾ ಗುಟ್ಟಾ 21–14, 14–21, 25–23ರಲ್ಲಿ ಮೆಯ್ ಕುವಾನ್ ಚು ಮತ್ತು ಲೀ ಮೆಂಗ್ ಯಿಯಾನ್ ಅವರನ್ನು ಮಣಿಸಿತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.