ಎರಡನೇ ಸುತ್ತಿನ 2ಜಿ ಹರಾಜು ಮಾರ್ಚ್‌ನಲ್ಲಿ

7

ಎರಡನೇ ಸುತ್ತಿನ 2ಜಿ ಹರಾಜು ಮಾರ್ಚ್‌ನಲ್ಲಿ

Published:
Updated:
ಎರಡನೇ ಸುತ್ತಿನ 2ಜಿ ಹರಾಜು ಮಾರ್ಚ್‌ನಲ್ಲಿ

ನವದೆಹಲಿ (ಪಿಟಿಐ); ಸಚಿವ ಸಂಪುಟ ಒಪ್ಪಿಗೆ ಬಳಿಕ ಎರಡನೇ ಸುತ್ತಿನ 2ಜಿ ತರಂಗಾಂತರ ಹಂಚಿಕೆ ಹರಾಜನ್ನು ಬರುವ ಮಾರ್ಚ್ ನಲ್ಲಿ ನಡೆಸಲಾಗುವುದು ಎಂದು ದೂರಸಂಪರ್ಕ ಖಾತೆ ಸಚಿವ ಕಪಿಲ್ ಸಿಬಲ್ ಸೋಮವಾರ ತಿಳಿಸಿದರು.

ಎರಡನೇ ಸುತ್ತಿನ ಹರಾಜು ಬಹುತೇಕ ಮಾರ್ಚ್ 11ರಿಂದ ಪ್ರಾರಂಭವಾಗಲಿದೆ ಎಂದು ಅವರು ಮಾಹಿತಿ ನೀಡಿದರು.ಈ ಭಾರಿಯ ಹರಾಜಿನಲ್ಲಿ 800 ಮೆಗಾ ಹರ್ಟ್ಸ್ ಮತ್ತು ಸಿಡಿಎಂಎ ಮೊಬೈಲ್ ಸೇವೆಗೆ ಹೆಚ್ಚಿನ ಆಧ್ಯತೆ ನೀಡಲಾಗುವುದು ಎಂಬ ಸುಳಿವನ್ನು ಸಚಿವರು ನೀಡಿದರು.ಸಿಡಿಎಂಎ ಸೇವಾ ಶುಲ್ಕದಲ್ಲಿ  ಶೇ 20 ರಿಂದ 30ರ ವರೆಗೆ ರಿಯಾಯಿತಿ ನೀಡುವ ಸಂಬಂಧ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಸಚಿವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry