ಎರಡನೇ ಸ್ವಾತಂತ್ರ್ಯ ಸಂಗ್ರಾಮ ಘೋಷಿಸಲು ಆಗ್ರಹ

7

ಎರಡನೇ ಸ್ವಾತಂತ್ರ್ಯ ಸಂಗ್ರಾಮ ಘೋಷಿಸಲು ಆಗ್ರಹ

Published:
Updated:

ಚನ್ನರಾಯಪಟ್ಟಣ: ಮದ್ಯಪಾನ ಮತ್ತು ಮಾದಕ ದ್ರವ್ಯಗಳಿಂದ ದೂರವಿರುವಂತೆ ಯುವಜನಾಂಗದಲ್ಲಿ  ಜಾಗೃತಿ ಮೂಡಿಸ ಬೇಕಿದೆ ಎಂದು ಕರ್ನಾಟಕ ಮದ್ಯಪಾನ ಸಂಯಮ ಮಂಡಳಿಯ ಕಾರ್ಯದರ್ಶಿ ಎಚ್.ಬಿ. ದಿನೇಶ್ ತಿಳಿಸಿದರು.ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜು, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಮತ್ತು ಹಿರಿಯ ವಿದ್ಯಾರ್ಥಿಗಳ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ `ಮಹಾತ್ಮ ಗಾಂಧೀಜಿ ವಿಚಾರಧಾರೆ ಮತ್ತು ಉಪನ್ಯಾಸ ಮಾಲಿಕೆ ಸಮಾರಂಭ~ದಲ್ಲಿ ಗುರುವಾರ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿ ಅವರು ಸ್ವಾತಂತ್ರ್ಯ ಹೋರಾ ಟದ ಜೊತೆ ಸಮಾಜದಲ್ಲಿರುವ ಅನಿಷ್ಠ ಗಳನ್ನು ನಿವಾರಿಸಲು ಯತ್ನಿಸಿದರು. ಮದ್ಯಪಾನ, ಮಾದಕ ದ್ರವ್ಯಗಳು ಮನುಷ್ಯನ ದೇಹ ಮತ್ತು ಅತ್ಮವನ್ನು ಹಾಳುಮಾಡುತ್ತವೆ ಎಂದರು.ಗಾಂಧೀಜಿ ಶಾಂತಿ ಪ್ರತಿಷ್ಟಾಪನದ ಅಧ್ಯಕ್ಷ ಡಾ.ವುಡೇ ಪಿ. ಕೃಷ್ಣ ಮಾತನಾಡಿ, ದೇಶದ ಸಂಸ್ಕೃತಿ, ಪರಂಪರೆಗೆ ಅನುಸಾರವಾಗಿ ಶಿಕ್ಷಣ ನೀತಿ ರೂಪಿಸಬೇಕು. ಉತ್ತಮ ಪುಸ್ತಕಗಳು ಒಳ್ಳೆಯ ಸ್ನೇಹಿತರಿದ್ದಂತೆ. ದೇಶಕ್ಕೆ ರಾಜಕೀಯ ಸ್ವಾತಂತ್ರ್ಯ ಬಂದಿದೆ. ಆದರೆ ನೈತಿಕ, ಆರ್ಥಿಕ, ಸಾಮಾಜಿಕ ಸ್ವಾತಂತ್ರ್ಯ ಸಿಕ್ಕಿಲ್ಲ.ಇಂದಿಗೂ ಶೇ. 30ರಷ್ಟು ಜನ ಮೂರು ಹೊತ್ತಿನ ತುತ್ತಿಗೂ ಇಲ್ಲದೇ ಬದುಕುತ್ತಿದ್ದಾರೆ. ಜಾತಿ, ಧರ್ಮ, ಭ್ರಷ್ಟಾಚಾರ ರಹಿತ ಸಮಾಜ ನಿರ್ಮಿಸಬೇಕಾದರೆ ಎರಡನೇ ಸ್ವಾತಂತ್ರ್ಯ ಸಂಗ್ರಾಮ ಘೋಷಿಸಬೇಕಿದೆ ಎಂದರು.ಆದಿಚುಂಚನಗಿರಿ ಮಠದ ಕಾರ್ಯದರ್ಶಿ ನಿರ್ಮಲಾನಂದನಾಥ ಸ್ವಾಮೀಜಿ, ಶಾಖಾಮಠಾಧೀಶ ಶಂಭುನಾಥ ಸ್ವಾಮೀಜಿ, ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ. ಶ್ರೀನಿವಾಸಯ್ಯ, ಮಾಜಿ ಶಾಸಕ ಡಾ.ಎನ್.ಬಿ. ನಂಜಪ್ಪ, ಸಂಸ್ಥೆ ಕಾರ್ಯದರ್ಶಿ ಎಚ್.ಎಸ್. ವಿಜಯಕುಮಾರ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಜಣ್ಣ, , ಆದಿಚುಂಚನಗಿರಿ ಬಿ.ಇಡಿ,. ಕಾಲೇಜು ಪ್ರಾಚಾರ್ಯ ಡಾ.ಕೆ. ರಘು, ಐಟಿಐ ಕಾಲೇಜು ಪ್ರಾಚಾರ್ಯ ಶೇಖರೇಗೌಡ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ. ಶಿವಣ್ಣ, ಕಸಾಪ ಅಧ್ಯಕ್ಷ ಪ್ರೊ. ಎಚ್. ಸಿದ್ದೇಗೌಡ, ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಸಿ.ಎನ್. ಅಶೋಕ್, ಬಿ, ಪ್ರಕಾಶ್ ಜೈನ್ ಉಪಸ್ಥಿತರಿದ್ದರು.ಸಹ ಪ್ರಾಧ್ಯಾಪಕ ಕೆ.ಎಸ್. ಪಾಪೇಗೌಡ ಸ್ವಾಗತಿಸಿದರೆ, ಕೆ. ಕುಮಾರ್ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಎಸ್.ಬಿ. ಶಿವಕುಮಾರ್ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry