ಭಾನುವಾರ, ಮೇ 9, 2021
25 °C

ಎರಡು ಕಡೆ ಅಪಘಾತ: ಇಬ್ಬರು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಳೆನರಸೀಪುರ: ತಾಲ್ಲೂಕಿನಲ್ಲಿ ಶುಕ್ರವಾರ ರಾತ್ರಿ ವೇಳೆ ನಡೆದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಮೃತಪಟ್ಟು ಮೂವರು ಆಸ್ಪತ್ರೆ ಸೇರಿದ ಘಟನೆ ನಡೆದಿದೆ.                

    

ಶುಕ್ರವಾರ ರಾತ್ರಿ ವೇಳೆ ಹಾಸನ ಮೈಸೂರು ರಸ್ತೆಯ ಪೂಜೆಕೊಪ್ಪಲು ಸಮೀಪ ಟಿ.ವಿ.ಎಸ್ ಫಿಯಾರೋ ಬೈಕನಲ್ಲಿ ಚಲಿಸುತ್ತಿದ್ದ ಮೂವರು ಯುವಕರು ರಸ್ತೆ ಬದಿಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ಇವರನ್ನು ಹಾಸನದ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸುವಾಗ ಚಿಕಿತ್ಸೆ ಫಲಕಾರಿ ಯಾಗದೆ ಚಿಕ್ಕಕಾಡನೂರಿನ ರಾಮು(26) ಮೃತಪಟ್ಟಿದ್ದಾನೆ. ಇದೇ ಗ್ರಾಮದ ವಸಂತ ಹಾಗೂ ಬೆಂಗಳೂರು ಬಿ.ಎಂ.ಟಿ.ಸಿ ಚಾಲಕ ಸುರೇಶ ಚಿಕಿತ್ಸೆ ಪಡೆಯುತ್ತಿದ್ದಾರೆ.ತಾಲ್ಲೂಕಿನ ಚಾಕೇನಹಳ್ಳಿ ಸಮೀಪ ಹಾಲಿನ ವಾಹನವೊಂದು ಬೈಕಿಗೆ ಡಿಕ್ಕಿಹೊಡೆದು ವಾಸು (35) ಎಂಬ ವ್ಯಕ್ತಿ ಮೃತಪಟ್ಟು ಚಿಕ್ಕೇಗೌಡ ಎಂವ ವ್ಯಕ್ತಿಗೆ ಪೆಟ್ಟುಬಿದ್ದು ಆಸ್ಪತ್ರೆಗೆ ದಾಖಲಾಗಿದ್ದಾನೆ. ಪೊಲೀಸರು ಎರಡೂ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.ಸಿಡಿಲು: ಕುಸಿದ ಮನೆ ಛಾವಣಿ

ಆಲೂರು: ಸಿಡಿಲು ಬಡಿದು ಮನೆಯೊಂದರ ಛಾವಣಿ ಮುರಿದಿರುವ ಘಟನೆ ತಾಲ್ಲೂಕಿನ ಮರಸು ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.ಆಲೂರು ತಾಲ್ಲೂಕಿನ ಮರಸು ಹೊಸಳ್ಳಿ ಗ್ರಾಮದ ರಂಗೇಗೌಡ ಎಂಬುವರಿಗೆ ಸೇರಿದ ಹೊಸದಾಗಿ ನಿರ್ಮಿಸಿರುವ ಮನೆ ಛಾವಣಿ ಶುಕ್ರವಾರ ಸುರಿದ ಭಾರಿ ಮಳೆ ಮತ್ತು ಸಿಡಿಲಿನ ಆರ್ಭಟಕ್ಕೆ ಮನೆಯ ಛಾವಣಿ ಮುರಿದು ಬಿದ್ದಿದೆ ಮನೆಯವರಿಗೆ ಯಾವುದೇ ತರಹದ ತೊಂದರೆಯಾಗದೆ ಪ್ರಾಣಪಾಯದಿಂದ ಪಾರಾಗಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.