ಎರಡು ಕಡೆ ದಾಳಿ: ಕಳ್ಳಬಟ್ಟಿ ಜಪ್ತಿ

7

ಎರಡು ಕಡೆ ದಾಳಿ: ಕಳ್ಳಬಟ್ಟಿ ಜಪ್ತಿ

Published:
Updated:

ಗುಲ್ಬರ್ಗ: ಅಬಕಾರಿ ಪೊಲೀಸರು ನಡೆಸಿದ ಎರಡು ಪ್ರತ್ಯೇಕ ದಾಳಿಗಳಲ್ಲಿ 200 ಲೀಟರ್ ಕಲಬೆರಿಕೆ ಸೇಂದಿ ಹಾಗೂ ಬಟ್ಟಿ ಸಾರಾಯಿ ಜಪ್ತಿ ಮಾಡಲಾಗಿದೆ.ಆಳಂದ ತಾಲ್ಲೂಕಿನ ಅಣೂರ- ತೂಗಾಂವ ಗ್ರಾಮಗಳ ರಸ್ತೆ ಪಕ್ಕದಲ್ಲಿ ಕಲಬೆರಿಕೆ ಸೇಂದಿ ಮಾರುತ್ತಿದ್ದ ಝಳಕಿ (ಕೆ) ಗ್ರಾಮದ ಅಣ್ಣಪ್ಪ ಶಿವಶರಣಪ್ಪ ಜಮಾದಾರ ಎಂಬಾತನನ್ನು ಬಂಧಿಸಿ, 200 ಲೀಟರ್ ಸೇಂದಿ ವಶಪಡಿಸಿಕೊಳ್ಳಲಾಗಿದೆ.ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಗುಲ್ಬರ್ಗ ನಗರದ ಭರತನಗರ ತಾಂಡಾದ ತಿಪ್ಪಮ್ಮ ಬಾಬು ಚವ್ಹಾಣ ಎಂಬುವವರ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು ಒಟ್ಟ ಸಾವಿರ ರೂಪಾಯಿ ಮೊತ್ತದ ಐದು ಲೀಟರ್‌ಬಟ್ಟಿ ಸಾರಾಯಿ ಮತ್ತು ಹತ್ತು ಕಿಲೋ ಕೊಳೆತ ಬೆಲ್ಲ ಜಪ್ತಿ ಮಾಡಿದ್ದಾರೆ. ಆರೋಪಿ ಪರಾರಿಯಾಗಿದ್ದು, ತನಿಖೆ ನಡೆದಿದೆ.ಅಬಕಾರಿ ದಾಳಿ: ಮದ್ಯ ವಶ

ಗುಲ್ಬರ್ಗ: ಚಿತ್ತಾಪುರ ತಾಲ್ಲೂಕಿನ ಕೊಂಚೂರ, ಬಳ್ಳೂಡಗಿ ಗ್ರಾಮಗಳಲ್ಲಿ ದಾಳಿ ನಡೆಸಿದ ಅಬಕಾರಿ ಪೊಲೀಸರು, ಸಂಗ್ರಹಿಸಿ ಇಟ್ಟಿದ್ದ ಅಕ್ರಮ ಮದ್ಯ ವಶಪಡಿಸಿಕೊಂಡಿದ್ದಾರೆ.ದಾಳಿಯಲ್ಲಿ ಒಟ್ಟು 15,000 ರೂಪಾಯಿ ಮೊತ್ತದ 38 ಲೀಟರ್ ಮದ್ಯ ಹಾಗೂ 31 ಲೀಟರ್ ಬಿಯರ್ ವಶಪಡಿಸಿಕೊಳ್ಳಲಾಗಿದೆ. ಮಲ್ಲಿಕಾರ್ಜುನ ಬಾಲಬಂಡಪ್ಪ, ನಾಗಪ್ಪ ರವೀಂದ್ರ, ಇಬ್ರಾಹಿಂಶಾ ಮೆಹಬೂ, ಇಮಾಮಸಾಬ್ ಮೆಹಬೂಬಸಾಬ್, ಬನ್ನು ಚವ್ಹಾಣ ಎಂಬುವವರು ಪರಾರಿಯಾಗಿದ್ದಾರೆ. ಚಿತ್ತಾಪುರ ವಲಯ ಸಬ್ ಇನ್‌ಸ್ಪೆಕ್ಟರ್‌ಗಳಾದ ನಾಗಪ್ಪ, ಮಂಜುನಾಥ ಮಳ್ಳಗೇರಿ ಹಾಗೂ ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry