ಶುಕ್ರವಾರ, ನವೆಂಬರ್ 22, 2019
20 °C

ಎರಡು ಕವಿತೆಗಳು

Published:
Updated:

ಗಾಳಿಯಲಿ ತೇಲಿ ಹೋದಗಾಳಿಯಲಿ ತೇಲಿ ಹೋದ

ಅದೆಷ್ಟು ಮಾತು ಕಣ್ಣಿಗೆ ಕಾಣಿಸದೆ

ಹೋಗಿವೆ...

ಬೆಳಕಿನಲಿ ಬೆರೆತು ಹೋದ

ಅದೆಷ್ಟು ನಗು ಕಣ್ಣಿಗೆ ಕಾಣಿಸದೆ

ಹೋಗಿವೆ...

ನೀರಿನಲಿ ಮುಳುಗಿ ಹೋದ

ಅದೆಷ್ಟು ಅಳು ಕಣ್ಣಿಗೆ ಕಾಣಿಸದೆ

ಹೋಗಿವೆ...

ಅವಾವೂ ಕಾಣಿಸದೆ ಹೋಗಬೇಕಾದ್ದೆ.

ಇಲ್ಲದಿದ್ದರೆ ಮನುಷ್ಯ ಹೇಗೆ

ಹೊಸದು ಆದಾನು?

***

ಮರೆಯಲ್ಲಿದೆ ನವಿಲುಮರೆಯಲ್ಲಿದೆ ನವಿಲು

ಬೆಳಗಿನ ಬಿಸಿಲನು ಮೇಯುತಿದೆ.

ಹಾವಿನ ಪೊರೆ ತುಳಿಯುತಿದೆ.

ಅಪನಂಬಿಕೆಯಲೆ ಬೇಯುವ ಮನದಿ

ಯಾವುದೂ ಬೇಯುವುದು:

ಪೊರೆ, ಬಿಸಿಲು, ನವಿಲು...

ಉಳಿವ ಹಲ್ಲಲಿ ಕಡೆಯ ಊಟದ ಸ್ವಾದ

ಬಣ್ಣನೆಯ

ಕೇಳುವವರಾರು?

ಪ್ರತಿಕ್ರಿಯಿಸಿ (+)