ಬುಧವಾರ, ಮೇ 12, 2021
18 °C

ಎರಡು ಗ್ರಾಮ: ಒಂದೇ ಕೊಳವೆ ಬಾವಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂತೇಮರಹಳ್ಳಿ: ಎರಡು ಗ್ರಾಮಗಳಿಗೆ ಒಂದೇ ಕೊಳವೆ ಬಾವಿ, ಕೇವಲ ಒಂದು ಗಂಟೆ ಮಾತ್ರ ಕುಡಿಯುವ ನೀರು, ಪಂಪ್‌ಸೆಟ್ ಹೊಂದಿರುವ ಗದ್ದೆಗಳೇ ಕುಡಿಯುವ ನೀರಿಗೆ ಆಶ್ರಯ. ಕೈಪಂಪು ಗಳಿಲ್ಲ, ತೊಂಬೆಗಳಿಲ್ಲ. ಹೂಳೆತ್ತಿಸದೇ ಇರುವ ಚರಂಡಿಯ ಕೆಟ್ಟ ವಾಸನೆಯಲ್ಲಿ ಬದುಕುತ್ತಿರುವ ಸಮೀಪದ ಹೊಸ ಮೋಳೆ ಗ್ರಾಮದ ಜನತೆ.ಕೆಂಪನಪುರ ಗ್ರಾಮಪಂಚಾಯಿತಿಗೆ ಸೇರಿದ ಹೊಸಮೋಳೆ ಗ್ರಾಮದಲ್ಲಿ 700ರಷ್ಟು ಜನಸಂಖ್ಯೆ ಇದೆ. ಗ್ರಾಮಕ್ಕೆ ಒಂದು ಕೊಳವೆ ಬಾವಿ ಕೊರೆಯಿಸಲಾಗಿದೆ. ಸನಿಹದಲ್ಲಿರುವ ಮರಹಳ್ಳಿ ಮೋಳೆಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದ ಪರಿಣಾಮ ಹೊಸಮೋಳೆಯಿಂದಲೇ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದೆ.ಆದರೇ, ಜನಸಂಖ್ಯೆಗೆ ಅನುಗುಣವಾಗಿ ಕುಡಿಯುವ ನೀರಿನ ಲಭ್ಯತೆ ಇಲ್ಲ. ಅಸಮರ್ಪಕ ವಿದ್ಯುತ್‌ನಿಂದ ಕೇವಲ 1 ಗಂಟೆ ಮಾತ್ರ ಕುಡಿಯುವ ನೀರು ದೊರೆಯುತ್ತಿದೆ. ಇರುವ 1 ಓವರ್ ಹೆಡ್ ಟ್ಯಾಂಕ್‌ಗೆ ಸಂಪೂರ್ಣವಾಗಿ ನೀರು ತುಂಬಿಸಲಾಗುತ್ತಿಲ್ಲ.ಗ್ರಾಮದ ಹೆಂಗಸರು ಮಕ್ಕಳು ಕುಡಿಯುವ ನೀರಿಗಾಗಿ ವಿದ್ಯುತ್‌ಇದ್ದ ಸಮಯದಲ್ಲಿ ಪಂಪ್‌ಸೆಟ್ ಹೊಂದಿರುವ ಹೊಲ ಗದ್ದೆ ಆಶ್ರಯಿಸ ಬೇಕಾಗಿದೆ. ಜಾನುವಾರುಗಳಿಗೆ, ಇನ್ನಿತರ ಗೃಹ ಬಳಕೆಗೆ ಕೆರೆಯ ನೀರನ್ನೇ ಗ್ರಾಮದ ಜನತೆ ಹೆಚ್ಚಾಗಿ ಬಳಸಿಕೊಳ್ಳತ್ತಿದ್ದಾರೆ.ಗ್ರಾಮದಲ್ಲಿ ಇರುವ 2 ಕೈಪಂಪುಗಳು ದುರಸ್ತಿಗೊಂಡಿವೆ. ರಿಪೇರಿ ಮಾಡುವ ಕೆಲಸಕ್ಕೆ ಪಂಚಾಯಿತಿಯವರು ಮುಂದಾಗಿಲ್ಲ. ಒಂದು ತೊಂಬೆಗೆ ನೀರು ಸರಬರಾಜು ಮಾಡುತ್ತಿದ್ದ ಕೊಳವೆ ಬಾವಿಗೆ ಅಂತರ್ಜಲ ಸಮಸ್ಯೆ ಯಿಂದ ನೀರುಬತ್ತಿ ಹೋಗಿದೆ. ಮತೊಂದು ಕೊಳವೆ ಬಾವಿ ಕೊರೆಯಿಸಿ ನೀರು ತುಂಬಿಸುವ ಕೆಲಸ ಮಾಡಿಲ್ಲದ ಕಾರಣ ಇರುವ ಒಂದು ತೊಂಬೆ ಅನಾಥವಾಗಿ ನಿಂತಿದೆ.ಗ್ರಾಮದಲ್ಲಿ ಅಸಮ ರ್ಪವಾಗಿ ಚರಂಡಿ ನಿರ್ಮಿಸಲಾಗಿದೆ. ಶಾಲೆಯ ಸಮೀಪವಿರುವ ಚರಂಡಿಗೆ ಹೂಳು ತೆಗೆಸಿ ಕಸದ ರಾಶಿಯನ್ನು ಸ್ಥಳದಲ್ಲಿಯೇ ಇಡಲಾಗಿದೆ. ಕಸವನ್ನು ಗ್ರಾಮದಿಂದ ಹೊರ ಸಾಗಿಸಿಲ್ಲ. ಮನೆಗಳ ಮುಂಭಾಗ ಇರುವ ಚರಂಡಿಗೆ ಹೂಳು ತೆಗೆಸದೇ ಕೆಟ್ಟ ವಾಸನೆ ಸೇವಿ ಸುವಂತಾಗಿದೆ ಎಂದು ಹೆಂಗಸರು ದೂರುತ್ತಾರೆ.ಕೈಪಂಪುಗಳನ್ನು ದುರಸ್ತಿಗೊಳಿಸಿ, 2 ಗ್ರಾಮಗಳಿಗೂ ಕೊಳವೆಬಾವಿ ಕೊರೆಯಿಸಿ ನೀರಿನ ವ್ಯವಸ್ಥೆಯನ್ನು ಗ್ರಾಮಕ್ಕೆ ಕಲ್ಪಿಸಬೇಕು ಎಂದು ಗ್ರಾಮದ ಮಹೇಶ, ನಂಜುಂಡಸ್ವಾಮಿ ಒತ್ತಾಯಿಸಿದ್ದಾರೆ.    

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.