ಎರಡು ಮನೆ ಧ್ವಂಸ: ಬೈಕ್, ಸೈಕಲ್‌ಗೆ ಬೆಂಕಿ

7

ಎರಡು ಮನೆ ಧ್ವಂಸ: ಬೈಕ್, ಸೈಕಲ್‌ಗೆ ಬೆಂಕಿ

Published:
Updated:

ಹಾವೇರಿ: ಎರಡು ಕುಟುಂಬಗಳ ಮಧ್ಯದ ಜಾಗೆ ವಿವಾದವೊಂದು ಘರ್ಷಣೆಗೆ ತಿರುಗಿದ ಪರಿಣಾಮ ಘಟನೆ ಯಲ್ಲಿ ಎರಡು ಮನೆಗಳು ಸಂಪೂರ್ಣ ಧ್ವಂಸಗೊಂಡಿದ್ದು, ಎರಡು ಬೈಕ್ ಹಾಗೂ ಎರಡು ಸೈಕಲ್‌ಗೆ ಬೆಂಕಿಗೆ ಆಹುತಿಯಾದ ಘಟನೆ ತಾಲ್ಲೂಕಿನ ಕಾಟೇನಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ.ನಂತರದಲ್ಲಿ ಈ ಘಟನೆ ಕೇವಲ ಎರಡು ಕುಟುಂಬಗಳಿಗೆ ಮಾತ್ರ ಸೀಮಿತ ವಾಗದೇ ಇಡೀ ಗ್ರಾಮವನ್ನು ವ್ಯಾಪಿ ಸಿದ್ದರಿಂದ ಗ್ರಾಮದಲ್ಲಿ ಉದ್ವಿಗ್ನ ವಾತಾ ವರಣ ನಿರ್ಮಾಣವಾಗಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಹೆಚ್ಚುವರಿ ಪೋಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.ಘಟನೆ ವಿವರ: ತಾಲ್ಲೂಕಿನ ಕಾಟೇನ ಹಳ್ಳಿ ಗ್ರಾಮದ ಬಾಗಲಕೋಟೆ ಹಾಗೂ ಕೊಂಡ್ಯಾಳ ಎಂಬ ಕುಟುಂಬಗಳ ಮಧ್ಯೆ ಹಿಂದಿನಿಂದಲೂ ಇದ್ದ ಜಾಗೆ ವಿವಾದ ಶನಿವಾರ ಮಾತಿಗೆ ಮಾತು ಬೆಳೆದು ಬುಗಿಲೆದ್ದಿದೆ.ಈ ಸಂದರ್ಭದಲ್ಲಿ ಕೊಂಡ್ಯಾಳ ಅವರ ಸಬಂಧಿ ಸತೀಶ ಜ್ಯೋತಿಬಣ್ಣದ ಅವರು ಬಾಗಲಕೋಟೆ ಕುಟುಂಬದ ರಾಜಪ್ಪ ಎಂಬುವವರನ್ನು ಥಳಿಸಿದ್ದಾರೆ. ಅಲ್ಲದೇ ರಾಜಪ್ಪ ಬಾಗಲಕೋಟೆ ಅವರ ಮನೆ ಹಾಗೂ ಕಿರಾಣಿ ಅಂಗಡಿಯನ್ನು ಧ್ವಂಸ ಗೊಳಿಸಿದ್ದಾರೆ.ಈ ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು, ಸತೀಶ ಜ್ಯೋತಿಬಣ್ಣದ ಅವರನ್ನು ತರಾಟೆಗೆ ತೆಗೆದು ಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮತ್ತೆ ಗ್ರಾಮಸ್ಥರು ಹಾಗೂ ಕ್ಯೋತಿಬಣ್ಣದ ಅವರ ನಡುವೆ ಮಾತಿನ ಚಕಮಕಿ ಶುರುವಾಗಿದೆ. ಆಗ ಗ್ರಾಮದ ಕೆಲವರು ಸತೀಶ ಜ್ಯೋತಿಬಣ್ಣದ ಅವರ ಮನೆ ಹಾಗೂ ಮೆಡಿಕಲ್ ಶಾಪ್‌ನ ಮೇಲೆ ಕಲ್ಲು ತೂರಾಟ ನಡೆಸಿ ಧ್ವಂಸಗೊಳಿ ಸಿದ್ದಾರೆ.ಇದೇ ಸಂದರ್ಭದಲ್ಲಿ ಸತೀಶ ಜ್ಯೋತಿ ಬಣ್ಣದ ಅವರಿಗೆ ಸೇರಿದ ಎರಡು ಬೈಕ್ ಹಾಗೂ ಎರಡು ಸೈಕಲ್‌ಗಳಿಗೆ ಬೆಂಕಿ ಹಚ್ಚಿದ್ದಾರೆ. ಇದರಿಂದ ಬೈಕ್‌ಗಳು ಹಾಗೂ ಸೈಕಲ್‌ಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ.

ಉದ್ವಿಗ್ನ ವಾತಾವರಣ: ಈ ಘಟನೆ ಯಿಂದ ಗ್ರಾಮದಲ್ಲಿ ಉದ್ವಿಗ್ನ ವಾತಾ ವರಣ ನಿರ್ಮಾಣವಾಗಿದೆ.ಅಂಗಡಿಕಾರರು ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿದ್ದರು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ  ಪೊಲೀಸರು ಅಲ್ಲಲ್ಲಿ ಗುಂಪು ಗುಂಪಾಗಿ ನಿಂತಿದ್ದ ಗ್ರಾಮಸ್ಥರನ್ನು ಚದುರಿಸುತ್ತಿದ್ದ ದೃಶ್ಯ ಕಂಡು ಬಂದಿತು.

ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರೆದಿದ್ದು, ಯಾವುದೇ ಅಹಿತಕರ ಘಟನೆಗಳು ಮರುಕಳಿಸದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪ ಡಿಸಲಾಗಿದೆ.ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎರಡು ದೂರು ಗಳು ದಾಖಲಾಗಿವೆ. ಘಟನೆಗೆ ಸಂಬಂಧಿ ಸಿದಂತೆ ಯಾರನ್ನು ವಶಕ್ಕೆ ತೆಗೆದು ಕೊಂಡಿಲ್ಲ ಎಂದು ಪೊಲೀಸ್ ಮೂಲ ಗಳು ತಿಳಿಸಿವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry