ಎರಡೂವರೆ ತಾಸು ವಿಳಂಬ

7

ಎರಡೂವರೆ ತಾಸು ವಿಳಂಬ

Published:
Updated:

ಬೆಂಗಳೂರು: ಸಮ್ಮೇಳನದಲ್ಲಿ ಆಯೋಜಿಸಲಾಗಿದ್ದ ಸಮಾನಾಂತರ ಗೋಷ್ಠಿಗಳು ಶುಕ್ರವಾರ ನಿಗದಿತ ವೇಳೆಗಿಂತ ಎರಡೂವರೆ ಗಂಟೆ ತಡವಾಗಿ ಆರಂಭವಾದವು. ಕೆ.ಆರ್.ರಸ್ತೆಯಲ್ಲಿರುವ ಕುವೆಂಪು ಕಲಾಕ್ಷೇತ್ರ ಹಾಗೂ ಮಹಿಳಾ ಸಮಾಜದಲ್ಲಿ ಆಯೋಜಿಸಲಾಗಿದ್ದ ಸಮಾನಾಂತರ ಗೋಷ್ಠಿಗಳು ಮಧ್ಯಾಹ್ನ 2 ಗಂಟೆಗೆ ಆರಂಭವಾಗಿತ್ತು.ಆದರೆ ಗೋಷ್ಠಿ ಆರಂಭವಾದಾಗ ಸಮಯ ಸಂಜೆ 4.30 ದಾಟಿತ್ತು. ಗೋಷ್ಠಿಯಲ್ಲಿ ವಿಚಾರ ಮಂಡಿಸುವವರನ್ನು ವಿಚಾರಿಸಲು ಯಾರೊಬ್ಬರ ಸುಳಿವೂ ಇರಲಿಲ್ಲ. ಗೋಷ್ಠಿ ಎಷ್ಟೊತ್ತಿಗೆ ಆರಂಭವಾಗುತ್ತದೆ ಎಂಬ ಬಗ್ಗೆ ಮಾಹಿತಿ ನೀಡುವವರೂ ಅಲ್ಲಿರಲಿಲ್ಲ. ಅವರ ಇರುವಿಕೆಯನ್ನು ಧ್ವನಿವರ್ಧಕದಲ್ಲಿ ಪ್ರಕಟಿಸುವ ಮೂಲಕ ಖಾತ್ರಿಪಡಿಸಿಕೊಳ್ಳುತ್ತಿದ್ದುದು ಆಭಾಸ ಉಂಟು ಮಾಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry