ಶನಿವಾರ, ಏಪ್ರಿಲ್ 17, 2021
23 °C

ಎರೆಹುಳು ಗೊಬ್ಬರಕ್ಕೆ ಹೆಚ್ಚಿದ ಬೇಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಟ್ಟೂರು: ಕೊಟ್ಟೂರು ಭಾಗದಲ್ಲಿ ಎರೆಹುಳು ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದೆ ಎಂದು ಇಲ್ಲಿನ ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಎ.ಎಚ್.ಎಂ. ಷಡಕ್ಷರಯ್ಯ ಹೇಳಿದರು.ಕಳೆದ ವರ್ಷ ಎರೆಹುಳು ಗೊಬ್ಬರಕ್ಕೆ ಬೇಡಿಕೆ ಇರಲಿಲ್ಲ. ಈ ವರ್ಷ ಎರೆಹುಳು ಗೊಬ್ಬರವನ್ನು ರೈತರು ಕೇಳಿ ಕೇಳಿ ರೈತ ಸಂಪರ್ಕ ಕೇಂದ್ರದಿಂದ ಖರೀದಿಸುತ್ತಿದ್ದಾರೆ ಎಂದು ಗುರುವಾರ ತಿಳಿಸಿದರು.ರೈತರು ರಾಸಾಯನಿಕ ಗೊಬ್ಬರ ಮತ್ತು ಎರೆಹುಳು ಗೊಬ್ಬರ ಎರಡರ ಫಲಿತಾಂಶವನ್ನು ತುಲನೆ ಮಾಡಿದ್ದು, ಎರೆಹುಳು ಗೊಬ್ಬರ ಉತ್ತಮ ಫಲಿತಾಂಶ ನೀಡುವುದನ್ನು ಮನಗಂಡು ರೈತರು ಎರೆಹುಳು ಗೊಬ್ಬರವನ್ನು ಹೆಚ್ಚಾಗಿ ಖರೀದಿಸುತ್ತಿದ್ದಾರೆ ಎಂದರು.ಸಾವಯವ ಗೊಬ್ಬರಕ್ಕೆ ಮಾನ್ಯತೆ ಹೆಚ್ಚಾಗಿದೆ. ಮುಖ್ಯವಾಗಿ ರಾಸಾಯನಿಕ ಗೊಬ್ಬರದ ಬೆಲೆ ಗಗನಕ್ಕೇರಿದೆ. ಒಂದು ಚೀಲ ಡಿಎಪಿ ಸಾವಿರ ರೂಪಾಯಿಗಿಂತ ಹೆಚ್ಚಾಗಿದೆ. ಡಿಎಪಿ ಖರೀದಿಗೆ  ಬದಲಾಗಿ 10 ಚೀಲ ಎರೆಹುಳು ಗೊಬ್ಬರ ಬರುತ್ತದೆ ಎಂದು ರೈತರು ಈ ಗೊಬ್ಬರಕ್ಕೆ ಮುಗಿ ಬೀಳುತ್ತಿದ್ದಾರೆ ಎಂದರು.ರೈತ ಸಂಪರ್ಕ ಕೇಂದ್ರದ ಮೂಲಕ 11 ಲೋಡ್ ಎರೆಹುಳ ಗೊಬ್ಬರವನ್ನು ಮಾರಾಟ ಮಾಡಲಾಗಿದೆ ಎಂದು ತಿಳಿಸಿದರು.ಈಗ ಮಳೆ ಬಂದಿಲ್ಲದ ಕಾರಣ ಎರೆಹುಳು ಗೊಬ್ಬರವನ್ನು ರೈತರು ತಾತ್ಕಾಲಿಕವಾಗಿ ನಿಲ್ಲಿಸಿದ್ದಾರೆ. ಮಳೆ ಆರಂಭವಾದರೆ ಪುನಃ ಎರೆಹುಳು ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಲಿದೆ ಎಂದು ತಿಳಿಸಿದರು.

ಸತತವಾಗಿ ಎರೆಹುಳು ಗೊಬ್ಬರವನ್ನು ಬಳಸುವುದರಿಂದ ಭೂಮಿಯ ಫಲವತ್ತತೆ ಹೆಚ್ಚಾಗಿ ಉತ್ತಮ ಬೆಳೆ ಬರುವುದರಲ್ಲಿ ಅನುಮಾನವಿಲ್ಲ ಎಂದು ಷಡಕ್ಷರಯ್ಯ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.