ಎರೆಹುಳು ಗೊಬ್ಬರ ಉತ್ಪಾದಿಸಲು ಸಲಹೆ

ಭಾನುವಾರ, ಜೂಲೈ 21, 2019
27 °C

ಎರೆಹುಳು ಗೊಬ್ಬರ ಉತ್ಪಾದಿಸಲು ಸಲಹೆ

Published:
Updated:

ಸೇಡಂ: ಕ್ಷೇತ್ರ ಯಾವುದೇ ಇರಲಿ ಆಸಕ್ತಿ, ನಿರಂತರ ಪರಿಶ್ರಮ ಮತ್ತು ಆಸಕ್ತಿಯಿಂದ ಮಾತ್ರ ಮನೆಯಿಂದ ಮಠ ಅಭಿವೃದ್ದಿ ಸಾಧ್ಯ ಎಂಬುದು ಜಾನಪದ ಕಲಾವಿದೆ ಮತ್ತು ಶಾಂಭವಿ ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಅಧ್ಯಕ್ಷೆ ಪ್ರೋ. ಶೋಬಾದೇವಿ ಚಕ್ಕಿ ಅಭಿಪ್ರಾಯಪಟ್ಟರು.ಅವರು ಗುರುವಾರ ಸಂಘ ಆಯೋಜಿಸಿದ್ದ ಮುಂಗಾರು ಹಂಗಾಮಿನ ಕೈ ತೋಟಗಾರಿಕೆ ಮಾಹಿತಿ ತರಬೇತಿ ಶಿಬಿರದಲ್ಲಿ ಮಾತನಾಡಿದರು. ಲಭ್ಯ ಇರುವ ಮನೆ ಸುತ್ತಲಿನ ಪರಿಸರದಲ್ಲಿ ಕೈ ತೋಟ ನಿರ್ಮಿಸಿಕೊಂಡು ದಿನಂಪ್ರತಿ ಅವಶ್ಯ ಇರುವ ಮತ್ತು ಕಾಲಕ್ಕೆ ತಕ್ಕಂತೆ ಕೊತಂಬರಿ, ಕರಿಬೇವು, ನುಗ್ಗೆ, ಪಾಲಕ್, ರಾಜಗಿರಿ, ಮೆಂತೆ, ನಿಂಬೆ ಹೀಗೆ ಕುಟುಂಬಕ್ಕೆ ಅವಶ್ಯ ಎನಿಸುವ ಪದಾರ್ಥಗಳನ್ನು ಮನೆ ಅಂಗಳದಿಂದಲೇ ಪಡೆಯುವಂತಾಗಬೇಕು ಎಂದು ಅವರು ಆಶಿಸಿದರು. ಈ ದಿಸೆಯಲ್ಲಿ ಉತ್ತಮ ಫಸಲಿಗೆ ಈ ಪರಿಸರದಲ್ಲಿಯೇ ಒಂದು ಎರೆಹುಳ ಗೊಬ್ಬರ ತೊಟ್ಟಿ ನಿರ್ಮಿಸಿ ಗೊಬ್ಬರ ತಯಾರಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು. ಈ ಗೊಬ್ಬರವೇ ಕೈ ಅಂಗಳದ ಕೈ ತೋಟಕ್ಕೆ ಉತ್ತಮ ಗೊಬ್ಬರವಾಗಲಿದೆ ಎಂದರು.ಇದರಿಂದ ಕುಟುಂಬದ ಆರ್ಥಿಕ ಹೊರೆ ಕಡಿಮೆ ಆಗುವುದಲ್ಲದೇ ಸ್ವಂತ ಬೆಳೆದ ಅವಶ್ಯ ವಸ್ತುಗಳನ್ನು ಪಡೆಯುವಲ್ಲಿ ಎಲ್ಲಿಲ್ಲದ ಸಂತಸ ಇದೆ ಎಂಬುದು ಅವರ ಬಲವಾದ ವಾದ. ಇನ್ನೂ ಅಂಗಳದಲ್ಲಿ ಲಭ್ಯವಾಗುವ ತರಕಾರಿ ಮತ್ತು ಟೆಂಗು ಇತರರಿಗೆ ಹಂಚಿ ಅವರು ನಮ್ಮ ಸಂತಸದಲ್ಲಿ ಭಾಗಿಯಾದರೆ ಅದು ಇನ್ನಷ್ಟು ಸಂತಸದ ಜೊತೆಗೆ ಉಲ್ಲಾಸ ಹೆಚ್ಚಿಸುತ್ತದೆ. ಮೇಲಾಗಿ ಕೈ ತೋಟ ಹೆಗ್ಗಳಿಕೆಗೆ ಪಾತ್ರವಾಗಿ ಇತರರಿಗೆ ಪ್ರೇರಣೆ ನೀಡಲು ಸಾಧ್ಯ ಎಂದು ಅವರು ಆಶಿಸಿದರು.ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ ಎಂಬ ದಾಸವಾಣಿ ನಿಜವಾಗಲು ಮುಂದಾಗದಿರಿ ಎಂದು ಚಕ್ಕಿ ಮನವಿ ಮಾಡಿದರು.ಕಾಯಕವೇ ಕೈಲಾಸ ಎಂದ ಬಸವಣ್ಣನವರ ವಚನ ಕಾರ್ಯರೂಪಕ್ಕೆ ಬಂದಾಗ ಮಾತ್ರ ಅ ಕಾಯಕದಲ್ಲಿ ನೈಪುಣ್ಯತೆ ಹೆಚ್ಚುತ್ತದೆ ಎಂದರು. ಶಾರದಾ ಬಾಯಿ ಬೊಮ್ಮನಳ್ಳಿ ಪ್ರಾರ್ಥಿಸಿದರು. ಪಲ್ಲವಿ ಹೇಮಂತ ಶಹಾ ಸ್ವಾಗತಿಸಿದರು. ಸವಿತಾ ಚವ್ಹಾಣ ಪರಿಚಯಿಸಿದರು. ಕಾರ್ಯದರ್ಶಿ ಚನ್ನಮ್ಮ ಭೀಮಾಶಂಕರ ಪಾಟೀಲ ನಿರೂಪಿಸಿದರು. ಸಂಗೀತಾ ಬಿರಾದಾರ, ವಿದ್ಯಾ ಐನಾಪೂರ, ಚಂದ್ರಕಲಾ ನಾಗಣ್ಣ, ಲಲಿತಾ ಕಿರಣಗಿ, ಕವಿತಾ ಖಜೂರಿ ಇದ್ದರು. ಸುಲೋಚನಾ ಮೈಲಾಪೂರ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry