ಎರ್ಮಾಳುಕಡಲ್ಕೊರೆತ: ಗಂಜಿ ಕೇಂದ್ರ ಆರಂಭ

7
ಕಡಲ್ಕೊರೆತ ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ

ಎರ್ಮಾಳುಕಡಲ್ಕೊರೆತ: ಗಂಜಿ ಕೇಂದ್ರ ಆರಂಭ

Published:
Updated:
ಎರ್ಮಾಳುಕಡಲ್ಕೊರೆತ: ಗಂಜಿ ಕೇಂದ್ರ ಆರಂಭ

ಪಡುಬಿದ್ರಿ: ತೆಂಕ ಎರ್ಮಾಳು ಗ್ರಾಮದಲ್ಲಿ ಕಳೆದ ನಾಲ್ಕು ದಿನಗಳಿಂದ ಉಂಟಾಗಿರುವ ಕಡಲ್ಕೊರೆತ ಪ್ರದೇಶಕ್ಕೆ ಬುಧವಾರ ಸಂಜೆ ಉಡುಪಿ ಜಿಲ್ಲಾಧಿಕಾರಿ ಡಾ.ಎಂಟಿ ರೇಜು ಭೇಟಿ ನೀಡಿ ಪರಿಶೀಲಿಸಿದರು.ಎರಡು-ಮೂರು ಕಡೆ ರಸ್ತೆ ತುಂಡಾ ಗಿರುವುದನ್ನು ಹಾಗೂ ತೀವ್ರ ಅಪಾಯ ಸ್ಥಿತಿಯ ಮನೆಗಳನ್ನು ವೀಕ್ಷಿಸಿದರು. ಬೃಹತ್ ಕಲ್ಲು ಹಾಕಲು ಸೂಚನೆ: ಇದೇ ವೇಳೆ ಜಿಲ್ಲಾದಿಕಾರಿಯವರು ಬೃಹತ್ ಬಂಡೆ ಕಲ್ಲುಗಳನ್ನು ತಂದು ಸುರಿ ಯುವಂತೆ ಬಂದರು ಮತ್ತು ಮೀನು ಗಾರಿಕಾ ಇಲಾಖಾಧಿಕಾರಿಗಳಿಗೆ ನಿರ್ದೇಶಿ ಸಿದರು. ಪಾದೂರು ತೈಲ ಸಂಗ್ರಹ ಣಾಗಾರದಿಂದ ಕಲ್ಲು ತರಲು ಇರುವ ತೊಡಕು ನಿವಾರಣೆಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.ಅನುದಾನ ಬಿಡುಗಡೆ:  ಕಡಲ್ಕೊರೆತ ತುರ್ತು ಕಾಮಗಾರಿಗೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿರುವುದಾಗಿ, ತಿಳಿಸಿದ ಜಿಲ್ಲಾಧಿಕಾರಿ, ಸಮರೋ ಪಾದಿಯಲ್ಲಿ ತಡೆಗೋಡೆ ಕಾಮಗಾರಿ ನಡೆಸುವಂತೆ ಬಂದರು ಇಲಾಖಾಧಿಕಾರಿ ತಾರಾನಾಥ್ ರಾಥೋಡ್‌ಗೆ ಸೂಚಿಸಿದರು.ಬಂದೋಬಸ್ತ್: ಆಕ್ರೋಶಿತ ಸ್ಥಳೀ ಯರು ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದು, ಇದರಿಂದ ಪೊಲೀಸ್ ಬಂದೋಬಸ್ತ್‌ನಲ್ಲಿ ಕಲ್ಲು ಹಾಕುವ ಪ್ರಕ್ರಿಯೆ ನಡೆಯುತ್ತಿದೆ.ಗಂಜಿ ಕೇಂದ್ರ: ತೆಂಕ ಗ್ರಾಮದಲ್ಲಿ 7ಮನೆಗಳು ತೀರಾ ಅಪಾಯ ಸ್ಥಿತಿ ತಲುಪಿದ್ದು, ಅವರಿಗೆ ಕಂದಾಯ ಇಲಾಖೆ ಯಿಂದ ನೋಟಿಸ್ ಜಾರಿ ಮಾಡಿದ್ದು, ಮನೆ ತೊರೆದು ಗಂಜಿ ಕೇಂದ್ರಕ್ಕೆ ತೆರಳುವಂತೆ ಸೂಚಿಸಿದ್ದಾರೆ. ತೆಂಕ ಮೊಗವೀರ ಸಭಾ ಭವನದಲ್ಲಿ ಗಂಜಿ ಕೇಂದ್ರ ಆರಂಭಿಸಲಾಗಿದೆ ಎಂದು ಕಂದಾಯ ಪರಿವೀಕ್ಷಕ ಗಣೇಶ ಬಳೆಗಾರ್ ತಿಳಿಸಿದ್ದಾರೆ.ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಉಪೇಂದ್ರ ನಾಯಕ್, ಸದಸ್ಯೆ ಗೀತಾಂಜಲಿ ಸುವರ್ಣ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಭಾಕರ ಶರ್ಮ, ಮೀನುಗಾರಿಕಾ ಇಲಾಖೆಯ ಎಂಎನ್ ಖಾರ್ವಿ, ಲವೀಶ್ ಕುಮಾರ್, ತಹಶೀ ಲ್ದಾರ್ ಗುರುರಾಜ್, ತಾಲ್ಲೂಕು ಪಂಚಾ ಯಿತಿ ಸದಸ್ಯೆ ಸುಮನಾ ಕಿಶೋರ್, ಗ್ರಾಪಂ. ಅಧ್ಯಕ್ಷೆ ಜಯಶ್ರೀ ಪೂಜಾರಿ, ಗಂಗಾಧರ ಸುವರ್ಣ, ಶ್ರಿಧರ ಬಂಗೇರಾ, ಸತೀಶ್ ಸಾಲ್ಯಾನ್ ಹಾಜರಿದ್ದರು.ಮುಂದುವರಿದ ಕಡಲ್ಕೊರೆತ: ಅಮೀನ್ ಮೂಲಸ್ಥಾನ ಬಳಿ ಚಂದ್ರ ಶೇಖರ ಸುವರ್ಣ ಎಂಬವರ ಸುಶೀಲ ನಿಲಯದ ಸಮೀಪ ಸಮುದ್ರ ಬೃಹತ್ ಅಲೆಗಳು ಅಪ್ಪಳಿಸುತ್ತಿವೆ. ಸುಂದರ ಸುವರ್ಣ, ಲಿಂಗಪ್ಪ ಪುತ್ರನ್‌ರ ಮನೆ ಸಹಿತ 6ಮನೆಗಳು ಅಪಾಯ ಸ್ಥಿತಿ ಯಲ್ಲಿದೆ. ಈ ಭಾಗದಲ್ಲಿ ಕಲ್ಲು ಹಾಕು ತ್ತಿದ್ದರೂ, ಬೃಹತ್ ಅಲೆಗಳು ಕ್ಷಣ ಮಾತ್ರದಲ್ಲಿ ಕಲ್ಲುಗಳನ್ನು ಸಮುದ್ರ ದೊಳಕ್ಕೆ ಸೆಳೆಯುತ್ತಿದ್ದು, ಪರಿಸ್ಥಿತಿ ತೀವ್ರ ಗಂಭೀರವಿದೆ. ಪಡುಬಿದ್ರಿ ಬೇಂಗ್ರೆ ಬಳಿಯೂ ರಸ್ತೆಗೆ ಬೃಹತ್ ಅಲೆಗಳು ಅಪ್ಪಳಿಸುತ್ತಿವೆ.ಬಡಾದಲ್ಲೂ ಕಡಲ್ಕೊರೆತ: ಬಡಾ ಎರ್ಮಾಳು ವ್ಯಾಯಾಮ ಶಾಲಾ ಬಳಿ 2ತೆಂಗಿನ ಮರ ಸಮುದ್ರ ಪಾಲಾಗಿದ್ದು, 7ಮರಗಳು ಅಪಾಯ ಸ್ಥಿತಿಯಲ್ಲಿದೆ. ಸೇಸಮ್ಮ ರಮೇಶ್ ಎಂಬವರ ಮನೆ ಯೂ ತೀರಾ ಸನಿಹದಲ್ಲಿದೆ. ಹೆಜಮಾಡಿ ಗೀತಾ ಮಂದಿರ ಬಳಿಯೂ ಸಮುದ್ರ ಕೊರೆತ ಕಾಣಿಸಿಕೊಂಡಿದ್ದು, ಸಮುದ್ರದ ಅಲೆಗಳ ಮೀನುಗಾರಿಕಾ ರಸ್ತೆ ದಾಟಿ ತೋಟದೊಳಗೆ ನುಗ್ಗಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry