ಎಲೆಕೋಸು ಖಾದ್ಯವಷ್ಟೇ ಅಲ್ಲ...

ಸೋಮವಾರ, ಜೂಲೈ 22, 2019
27 °C

ಎಲೆಕೋಸು ಖಾದ್ಯವಷ್ಟೇ ಅಲ್ಲ...

Published:
Updated:

ಭೂ ಮಂಡಲದಲ್ಲಿ ಸಸ್ಯಗಳು ಮೊತ್ತ ಮೊದಲು ಬೆಳೆಯಲು ಆರಂಭಿಸಿದಾಗಲೇ ಎಲೆಕೋಸು (ಕ್ಯಾಬೇಜ್) ಸಹ ಆವಿರ್ಭವಿಸಿರಬೇಕು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಕ್ಯಾಬೇಜ್ ಹೆಸರಿನ ಮೂಲ ಪ್ರಾಚೀನ ರೋಮ್ ನಗರದ ಲ್ಯಾಟಿನ್ ಭಾಷೆಯಲ್ಲಿ ವ್ಯಕ್ತವಾಗಿದೆ. ಲ್ಯಾಟಿನ್‌ನ `ಕಾಪುತ್' (ತಲೆ ಎಂದು ಅರ್ಥ) ಪದದಿಂದ ಕ್ಯಾಬೇಜ್ ಪದ ಉಗಮವಾಗಿದೆ.ಹಿಂದಿನಿಂದಲೂ ಎಲೆಕೋಸನ್ನು ಖಾದ್ಯ ಪದಾರ್ಥವಾಗಿ ಮಾತ್ರವಲ್ಲ ಔಷಧಿಯಾಗಿಯೂ ಬಳಸುತ್ತಿದ್ದರು. ಇದರಲ್ಲಿ ರೋಗ ವಾಸಿ ಮಾಡುವ ಶಕ್ತಿ ಅಂತರ್ಗತವಾಗಿದೆ ಎಂದು ವೈದ್ಯ ವಿಜ್ಞಾನದ ಪಿತಾಮಹ ಹಿಪೋಕ್ರಟಿಸ್, ತತ್ವಜ್ಞಾನಿ ಅರಿಸ್ಟಾಟಲ್, ಇತಿಹಾಸಕಾರ ಪ್ಲಿನಿ ಮುಂತಾದವರು ಅಭಿಪ್ರಾಯಪಟ್ಟಿದ್ದಾರೆ.ಪ್ರಾಚೀನ ರೋಮನ್ನರು ತಲೆನೋವು ಹಾಗೂ ನಿದ್ರಾಹೀನತೆಯ ನಿವಾರಣೆಗೆ, ಹೆರಿಗೆ ವೇಳೆ ಮಹಿಳೆಯ ಯಾತನೆ ಉಪಶಮನಗೊಳಿಸಲು, ರಕ್ತಸ್ರಾವ ನಿಲ್ಲಿಸಲು ಎಲೆಕೋಸನ್ನು ಬಳಸುತ್ತಿದ್ದರು.ಇದರಲ್ಲಿ ಅಸಾಧಾರಣ ಮಟ್ಟದಲ್ಲಿ ರೋಗ ಚಿಕಿತ್ಸಕ ಗುಣ ಅಡಗಿದೆ ಎಂಬುದನ್ನು ಆಧುನಿಕ ಔಷಧ ವಿಜ್ಞಾನವೂ ಸಮರ್ಥಿಸುತ್ತದೆ. ಎಲೆಕೋಸು ವಿಟಮಿನ್‌ಗಳಿಂದ ಸಮೃದ್ಧವಾಗಿದೆ. ಸೇಬಿನಲ್ಲಿ ಇರುವುದಕ್ಕಿಂತಲೂ ಅಧಿಕ ವಿಟಮಿನ್ `ಸಿ' ಇದರಲ್ಲಿ ಅಡಕವಾಗಿದೆ. ವಯಸ್ಕರು ಕೇವಲ 250 ಗ್ರಾಂ ಹಸಿ ಎಲೆಕೋಸು ತಿಂದರೆ ಅಗತ್ಯವಾದಷ್ಟು `ಸಿ' ವಿಟಮಿನ್ ಲಭಿಸುತ್ತದೆ.ಎಲೆಕೋಸಿನಲ್ಲಿರುವ ಅತಿ ಸೂಕ್ಷ್ಮ ಪೌಷ್ಟಿಕ ಅಂಶಗಳು ಮೆಟಬಾಲಿಸಂ ಪ್ರಕ್ರಿಯೆಯನ್ನು (ಚಯಾಪಚಯ ಕಾರ್ಯ) ನಿಯಂತ್ರಿಸುತ್ತವೆ. ಎಳೆಯ ಮಗುವಿನ ಶರೀರದ ಬೆಳವಣಿಗೆಯಲ್ಲೂ ಹಸಿ ಎಲೆಕೋಸು ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿನ ಕೆಲವು ಅಂಶಗಳು ಹೃದಯದ ರಕ್ತನಾಳಗಳ ಭಿತ್ತಿಗಳಲ್ಲಿ ತೇಪೆ ಹಚ್ಚಿದಂತಹ, ಆರೋಗ್ಯಕ್ಕೆ ಮಾರಕವಾದ ಕೊಬ್ಬು ರೂಪುಗೊಳ್ಳುವುದನ್ನು ಮತ್ತು ಪಿತ್ತಕೋಶದಲ್ಲಿ ಕಲ್ಲುಗಳು ಉಂಟಾಗುವ ವಿದ್ಯಮಾನವನ್ನು ತಡೆಗಟ್ಟುತ್ತವೆ.ಎಲೆಕೋಸಿನಲ್ಲಿರುವ ಹಸಿ ಸೆಲ್ಯುಲೋಸ್ ಆರೋಗ್ಯಕ್ಕೆ ತುಂಬಾ ಉಪಯುಕ್ತ. ಇದರ ಹಸಿರು ಸೊಪ್ಪು ರಕ್ತಹೀನತೆಯಿಂದ ಬಳಲುವವರಿಗೆ ತುಂಬಾ ಪ್ರಯೋಜನಕಾರಿ. ರಕ್ತದಲ್ಲಿ, ನರಗಳ ಅಂಗ ಸತ್ವಗಳಲ್ಲಿ, ಪಿತ್ತಕೋಶದಲ್ಲಿ ಉತ್ಪನ್ನವಾಗುವ ಕೊಲೆಸ್ಟ್ರಾಲ್‌ನ್ನು ಅದು ನಿವಾರಿಸುತ್ತದೆ. ಆ ಮೂಲಕ, ಹೃದಯದ ರಕ್ತನಾಳಗಳು ಪೆಡಸಾಗುವ, ದಪ್ಪವಾಗುವ ಸಮಸ್ಯೆಯನ್ನು ನಿವಾರಿಸುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry