ಗುರುವಾರ , ಜೂನ್ 24, 2021
29 °C
ಬೆಲೆಕುಸಿತದಿಂದ ಬೇಸರಗೊಂಡು ಬೆಳೆ ನಾಶ ಮಾಡಿದ ರೈತ

ಎಲೆಕೋಸು ಬೆಳೆದವನ ಕಿಸೆಗಿಲ್ಲ ಕಾಸು

ಪ್ರಜಾವಾಣಿ ವಾರ್ತೆ/ ಎನ್‌.ವಿ.ರಮೇಶ್‌ Updated:

ಅಕ್ಷರ ಗಾತ್ರ : | |

ಬಸವಾಪಟ್ಟಣ: ಎಲೆಕೋಸು ಬೆಳೆದಿರುವ ರೈತರು ಬೆಲೆ ಕುಸಿತದಿಂದ ಅತೀವ ಸಂಕಟಕ್ಕೆ ಗುರಿಯಾಗಿದ್ದಾರೆ. ಕ್ವಿಂಟಲ್‌ಗೆ ಕನಿಷ್ಠ ₨ 1,000ವರೆಗೆ ಬೆಲೆ ಇದ್ದ ಎಲೆಕೋಸನ್ನು ಕೇವಲ ₨ 100ಗಳಿಗೂ ಕೇಳುವರಿಲ್ಲದೇ ರೈತರು ಕಂಗಾಲಾಗಿದ್ದಾರೆ.

ವರ್ಷದ ಎಲ್ಲ ಕಾಲದಲ್ಲೂ ಬೇಡಿಕೆ ಇದ್ದ ಎಲೆಕೋಸಿಗೆ ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಉತ್ತಮ ಬೆಲೆ ಇರುತ್ತಿತ್ತು. ಮುಂಬರುವ ಬೇಸಿಗೆಯ ಹಂಗಾಮಿನ ದೃಷ್ಟಿಯಿಂದ ಅಪಾರ ಪ್ರಮಾಣದ ವೆಚ್ಚದಲ್ಲಿ ಕೋಸು ಬೆಳೆದ ರೈತ ಇಂದು ಬರಿಗೈಯಲ್ಲಿ ಕುಳಿತಿದ್ದಾನೆ.

ಬಸವಾಪಟ್ಟಣದ ರೈತ ಸಮೀಉಲ್ಲಾ ಅವರಿಗೆ ಸ್ವಂತ ಜಮೀನು ಇಲ್ಲ. ಪ್ರತಿವರ್ಷ ಬೇರೆಯವರ ಜಮೀನನ್ನು ಗುತ್ತಿಗೆ ಪಡೆದು, ಟೊಮೆಟೊ, ಬೆಂಡೇಕಾಯಿ, ಎಲೆಕೋಸು ಬೆಳೆಯುತ್ತಾರೆ.

ಎಲೆಕೋಸು ಬೆಳೆಯೂ ಚೆನ್ನಾಗಿತ್ತು. ಬೆಳೆ ಕಟಾವಿಗೆ ಬರುತ್ತಿದ್ದಂತೆ ಬೆಲೆ ಪಾತಾಳಕ್ಕೆ ಕುಸಿಯಿತು. ಸಗಟು ಮಾರಾಟದಾರರಿಗೆ ಕ್ವಿಂಟಲ್‌ಗೆ ₨ 800ರಿಂದ ₨ 1,000ವರೆಗೆ ಮಾರುತ್ತಿದ್ದ ಕೋಸು, ₨ 80ರಿಂದ ₨ 100ಕ್ಕೆ ಇಳಿಯಿತು.

ಇದರಿಂದ ಬೇಸರಗೊಂಡ ಸಮೀಉಲ್ಲಾ ಮಾರ್ಚ್‌ 15ರಂದು ಹುಲುಸಾಗಿ ಬೆಳೆದಿದ್ದ ಕೋಸನ್ನು ಕಿತ್ತುಬಿಸಾಡಿದ್ದಾರೆ.

ನಿರೀಕ್ಷೆ ಹುಸಿಯಾಗಿದೆ...

‘ಸುಮಾರು ₨ 60 ಸಾವಿರ ಖರ್ಚುಮಾಡಿ ಕೋಸು ಬೆಳೆದಿದ್ದೆ. ಹೊಲದ ಮಾಲೀಕರಿಗೆ ಮುಂಗಡವಾಗಿ ₨ 35 ಸಾವಿರ ನೀಡಿದ್ದೇನೆ. ₨ 2 ಲಕ್ಷ ಆದಾಯದ ನಿರೀಕ್ಷೆಯಿತ್ತು. ಬೆಳೆ ಕಟಾವು ಮಾಡಲೂ ಹಣವಿಲ್ಲದೇ ಅದರಲ್ಲಿಯೇ ಉಳುಮೆ ಮಾಡಿಸಿದ್ದೇನೆ. ಬೆಲೆಕುಸಿತ ನನ್ನ ನಿರೀಕ್ಷೆ ಹುಸಿಮಾಡಿದೆ. ಹೀಗಾದರೆ ರೈತರು ಹೇಗೆ ಬದುಕಬೇಕು? ಎಂದು ಸಮೀಉಲ್ಲಾ ‘ಪ್ರಜಾವಾಣಿ’ ಜತೆ ತಮ್ಮ ನೋವು ತೋಡಿಕೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.