ಬುಧವಾರ, ನವೆಂಬರ್ 13, 2019
17 °C

ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ

Published:
Updated:

ಮುಂಬೈ: ದೇಶದ ಮೊದಲ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ಕೇಂದ್ರವನ್ನು ಇಲ್ಲಿನ ಮುಂಬೈ-ವಡೋದರ ಹೆದ್ದಾರಿ ಭಾಗದಲ್ಲಿ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ಡಾ. ಸಿ.ಪಿ.ಜೋಷಿ ಶುಕ್ರವಾರ ಉದ್ಘಾಟಿಸಿದರು.ಥಾಣೆ ಜಿಲ್ಲೆಯ ದಹನು ಸಮೀಪದ ತವ ಗ್ರಾಮದಲ್ಲಿ ಉದ್ಘಾಟನೆಗೊಂಡ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ಕೇಂದ್ರವನ್ನು ಶೀಘ್ರವೇ ವಡೋದರ-ಅಹಮದಾಬಾದ್ ಹಾಗೂ ಮುಂಬೈ-ಪುಣೆಯ ರಾಷ್ಟ್ರೀಯ ಹೆದ್ದಾರಿ ವಲಯಕ್ಕೆ ವಿಸ್ತರಿಸಲು ನಿರ್ಧರಿಸಲಾಗಿದೆ.ಈ  ವ್ಯವಸ್ಥೆಯು `ರೇಡಿಯೋ ತರಂಗ ಗುರುತಿಸುವಿಕೆ ತಂತ್ರಜ್ಞಾನ' ಆಧರಿಸಿ ಕಾರ್ಯನಿರ್ವಹಿಸುತ್ತದೆ.

ಪ್ರತಿಕ್ರಿಯಿಸಿ (+)