ಶನಿವಾರ, ಜನವರಿ 18, 2020
18 °C
ಸರಣಿ-44

ಎಲೆಯ ವಿಸ್ತಾರ

ಪ್ರೊ ಸಿ.ಡಿ. ಪಾಟೀಲ್ Updated:

ಅಕ್ಷರ ಗಾತ್ರ : | |

ಸಾಮಗ್ರಿ: ಗ್ರಾಫ್ ಕಾಗದ, ಪೆನ್ಸಿಲ್ 

ವಿಧಾನ

1. ಒಂದು ಗ್ರಾಫ್ ಕಾಗದದ ಮೇಲೆ ಒಂದು ತಾಜಾ ಎಲೆಯನ್ನಿಟ್ಟು, ಸರಿ­ಯಾಗಿ ಹರಡಿ. ಎಲೆಯ ಅಂಚಿನವರೆಗೂ ಪೆನ್ಸಿಲ್‌ನಿಂದ ಗೆರೆ ಎಳೆಯಿರಿ.

2. ಎಲೆಯನ್ನು ಹೊರತೆಗೆದು ಗ್ರಾಫ್ ಕಾಗದದಲ್ಲಿ ಗೆರೆಯ ಮಧ್ಯೆ ಎಷ್ಟು  ಪೂರ್ಣಚೌಕಗಳಿವೆ (ಸೆ.ಮೀ.), ಅರ್ಧ ಹಾಗೂ 3/4ಕ್ಕಿಂತ ಹೆಚ್ಚು ಭಾಗ­ವನ್ನು ಆವರಿಸಿರುವ ಚೌಕಗಳೆಷ್ಟು, ಅರ್ಧಕ್ಕಿಂತ ಕಡಿಮೆ

ಚೌಕಗಳೆಷ್ಟು ಎಣಿಸಿ.

ಪ್ರಶ್ನೆ: ಪೂರ್ಣ, ಮುಕ್ಕಾಲು ಹಾಗೂ ಅರ್ಧಕ್ಕೂ ಹೆಚ್ಚು ಭಾಗ ಆವರಿಸಿರುವ ಚೌಕಗಳನ್ನು ಎಣಿಸಿ ಎಲೆಯ ವಿಸ್ತಾರವನ್ನು ಕಂಡು ಹಿಡಿಯಲು ಸಾಧ್ಯವೇ?

ಉತ್ತರ: ಚಿತ್ರದಲ್ಲಿ 9 ಸೆಂ.ಮೀ.ನ ಪೂರ್ಣ ಚೌಕಗಳು, 6 -ಮುಕ್ಕಾಲು ಚೌಕಗಳು ಹಾಗೂ ಅರ್ಧಕ್ಕೂ ಹೆಚ್ಚು ಭಾಗ ಆವರಿಸಿದ ಚೌಕಗಳಿವೆ.

ಅಂದರೆ, ಎಲೆಯ ಒಟ್ಟು ವಿಸ್ತಾರ 15 ಚದರ ಸೆ.ಮೀ. ಬೆಳೆಯುವ ಎಲೆಯ ಬೆಳವಣಿಗೆಯನ್ನು ನಾವು ಇದರಿಂದ ತಿಳಿಯಬಹುದು.

ಪ್ರತಿಕ್ರಿಯಿಸಿ (+)