ಎಲ್ಲದಕ್ಕೂ ವಾಸ್ತು ದೋಷದ ನೆಪ

7

ಎಲ್ಲದಕ್ಕೂ ವಾಸ್ತು ದೋಷದ ನೆಪ

Published:
Updated:

ವಿಷ್ಣುವರ್ಧನ್‌ ಸಮಾಧಿ, ವಿಧಾನ ಸೌಧ, ವಿಕಾಸಸೌಧ, ರೂಪಾಯಿ ಚಿಹ್ನೆ... ಎಲ್ಲದಕ್ಕೂ ವಾಸ್ತುದೋಷ,  ಫೆಂಗ್-ಶುಯಿ ದೋಷ...  ಹೀಗೆ ಪುಕಾರು ಹಬ್ಬಿಸುತ್ತಿರುವ ವಾಸ್ತು ಪಂಡಿತರು, ಸಂಖ್ಯಾ ಶಾಸ್ತ್ರಜ್ಞರು ವಿನಾಕಾರಣ ಜನರಲ್ಲಿ ಮೂಢ ನಂಬಿಕೆ ಹರಡುತ್ತಿದ್ದಾರೆ.



  ಯಾವುದನ್ನೂ ಬಿಡದೆ ಎಲ್ಲದಕ್ಕೂ ವಾಸ್ತು ದೋಷದ ಏನೇನೋ ಸುಳ್ಳು ಕಾರಣ ಹೇಳಿ ಜನರಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿಸಿ ತಮ್ಮ ಜೇಬು  ತುಂಬಿಸಿಕೊಳ್ಳುತ್ತಾರೆ. ಸಿನಿಮಾದವರು, ರಾಜಕಾರಣಿಗಳು  ಮತ್ತು  ಟಿ.ವಿ.ಯವರು ಈ  ಮೌಢ್ಯದ  ಪಬ್ಲಿಸಿಟಿ ಏಜೆಂಟರು.



ನ್ಯೂಮರಾಲಜಿ ಜನ್ಮಸ್ಥಳ ಯೂರೋಪ್‌. ಅದು  ಇಂಗ್ಲಿಷಿನ 26  (ರೋಮನ್) ಅಕ್ಷರಗಳನ್ನು ಆಧರಿಸಿದ್ದು.   ಇಂಗ್ಲಿಷ್ ಅಕ್ಷರಮಾಲೆ  ಅಪೂರ್ಣ ಮತ್ತು ಅವೈಜ್ಞಾನಿಕ ಎಂದು ಇಂಗ್ಲಿಷ್ ಸಾಹಿತಿ ಬರ್ನಾರ್ಡ್ ಷಾ   ಅವರೇ ಘೋಷಿಸಿದ್ದಾರೆ. ‘ಳ, ಣ’  ಮುಂತಾದ ಅಕ್ಷರಗಳಿಲ್ಲದ ಇಂಗ್ಲಿಷಿನಲ್ಲಿ  ನಮ್ಮ ಭಾರತೀಯ ಹೆಸರು ಬರೆದು ಜತೆಗೆ ಭಾರತೀಯ ಮೂಲದಲ್ಲದ ಕ್ರೈಸ್ತ ಶಕೆಯೊಂದಿಗಿನ ಜನ್ಮದಿನಕ್ಕೆ ತಾಳೆ ಹಾಕುತ್ತಾರೆ.   ನಮ್ಮ ಹೆಸರಿನ ಕಾಗುಣಿತ ಬದಲಿಸಿದರೆ ಸಾಕು ಅದೃಷ್ಟ  ಒಲಿಯುತ್ತದೆಯಂತೆ!



ಅಚ್ಚ ಭಾರತೀಯ ಅದೃಷ್ಟ ದೇವತೆಗೆ  ಇಂಗ್ಲಿಷ್ ಅಕ್ಷರ ಬಿಟ್ಟು ಭಾರತೀಯ ಭಾಷೆಯ ಅಕ್ಷರ ಓದಲು ಬರುವುದಿಲ್ಲವೇ?  

ಮೌಢ್ಯಕ್ಕೂ ತರ್ಕಕ್ಕೂ ಯಾವಾಗಲೂ ಬದ್ಧ ವೈರತ್ವ. ಮೂಢ ನಂಬಿಕೆಗಳ ಕಳ್ಳ ವ್ಯಾಪಾರಿಗಳನ್ನು ಕಠಿಣ ಕಾನೂನಿನ ಮೂಲಕ ತಹಬಂದಿಗೆ ತರಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry