ಎಲ್ಲರಲ್ಲಿ ಪರಿಸರ ಕಾಳಜಿ ಇರಲಿ

7

ಎಲ್ಲರಲ್ಲಿ ಪರಿಸರ ಕಾಳಜಿ ಇರಲಿ

Published:
Updated:

ಬೀದರ್: ಪರಿಸರದ ಬಗ್ಗೆ ಎಲ್ಲರು ಕಾಳಜಿ ವಹಿಸಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಸುಲ್ತಾನ್ ಸಲಹೆ ಮಾಡಿದರು.ಸ್ವಾಮಿ ವಿವೇಕಾನಂದ ಇಕೋಕ್ಲಬ್ ಬೀದರ್ ತಾಲ್ಲೂಕಿನ ಮಂದಕನಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ಪರಿಸರ ಸಂರಕ್ಷಣೆ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.ಪರಿಸರ ಸರಿಯಿದ್ದರೆ ಮಾತ್ರ ನಮಗೆ ಉಳಿಗಾಲ ಇದೆ. ಆದ್ದರಿಂದ ಪರಿಸರದ ಸಮತೋಲನ ಕಾಪಾಡುವುದಕ್ಕಾಗಿ ಮರಗಿಡಗಳನ್ನು ಬೆಳೆಸಬೇಕು ಎಂದು ಹೇಳಿದರು.ಸಸಿಗಳನ್ನು ಬೆಳೆಸುವ ಮೂಲಕ ಹೆಚ್ಚುತ್ತಿರುವ ತಾಪಮಾನವನ್ನು ಕಡಿಮೆ ಮಾಡಬಹುದು ಎಂದು ಅಧ್ಯಕ್ಷತೆ ವಹಿಸಿದ್ದ ಮುಖ್ಯಗುರು ಮಹಮ್ಮದ್ ಹಾದಿ ಅಭಿಪ್ರಾಯಪಟ್ಟರು.ಮರ ಗಿಡಗಳಿಂದ ಆಗುವ ಉಪಯೋಗಗಳ ಕುರಿತು ವಿಜ್ಞಾನ ಶಿಕ್ಷಕ ಮಹಿಪಾಲರೆಡ್ಡಿ ಉಪನ್ಯಾಸ ನೀಡಿದರು.

ಇಕೋಕ್ಲಬ್ ಕಾರ್ಯದರ್ಶಿ ದತ್ತಮ್ಮ, ಆಯೇಷಾ ಸಿದ್ದಿಕಿ, ಪ್ರಮುಖರಾದ ಅಶೋಕ ಮೇತ್ರೆ, ರಾಜಕುಮಾರ, ಜಯದೇವ ಕುಲಕರ್ಣಿ, ಯೋಗೇಂದ್ರ ಯದಲಾಪುರೆ ಮತ್ತಿತರರು ಉಪಸ್ಥಿತರಿದ್ದರು.ಶಿಕ್ಷಕ ಶಿವಶಂಕರ ಸ್ವಾಗತಿಸಿದರು. ಎ.ಕೆ. ಜೋಶಿ ನಿರೂಪಿಸಿದರು. ಚರ್ಚಾ ಸ್ಪರ್ಧೆ, ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಶಾಲಾ ಆವರಣದಲ್ಲಿ ಸಸಿಗಳನ್ನು ಸಹ ನೆಡಲಾಯಿತು.               

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry