ಬುಧವಾರ, ಏಪ್ರಿಲ್ 14, 2021
24 °C

ಎಲ್ಲರಿಗೂ ಒಂದೇ ನ್ಯಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೃದ್ರೋಗಿಯೊಬ್ಬರು ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರಿಂದ ಅವರ ಸಂಬಂಧಿಕರು ವೈದ್ಯರ ಮೇಲೆ ನಡೆಸಿದ ಹಲ್ಲೆಗೆ ಪ್ರತಿಕ್ರಿಯಿಸಿದ ವೈದ್ಯಕೀಯ ಶಿಕ್ಷಣದ ಸಚಿವರಾದ ಎ. ರಾಮದಾಸ್ “ಹಲ್ಲೆ ಮಾಡಿದವರ ವಿರುದ್ಧ ಕಾನೂನು ಕ್ರಮಕ್ಕೆ ಶಿಫಾರಸು  ಮಾಡಲಾಗುವುದು” ಎಂದಿದ್ದಾರೆ.ಚಾಮರಾಜನಗರ ಜಿಲ್ಲೆಯ ಗರ್ಭಿಣಿ ಸರ್ಕಾರಿ ಆಸ್ಪತ್ರೆಗೆ ಹೆರಿಗೆಗಾಗಿ ದಾಖಲಾಗಿದ್ದು ಹೆರಿಗೆ ನೋವಿನಿಂದ ಬಳಲುತ್ತಿದ್ದಾಗ ಸುಸೂತ್ರ ಹೆರಿಗೆ ಅಥವಾ ನೋವು ನಿವಾರಕ ಚಿಕಿತ್ಸೆ ನೀಡದೆ ಬಾಸುಂಡೆ ಬರುವಂತೆ ವೈದ್ಯರು ಹೊಡೆದಿದ್ದಾರೆ.ಇದರ ವಿರುದ್ಧ ಸಚಿವರು ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುತ್ತಾರೋ ಇಲ್ಲವೋ ತಿಳಿಯದು. ವೈದ್ಯರು ಗರ್ಭಿಣಿಗೆ ಹೊಡೆದಿದ್ದು “ಸುಸೂತ್ರ ಹೆರಿಗೆಗಾಗಿ ಪ್ರಕೃತಿ ಚಿಕಿತ್ಸೆ” ಎನ್ನೋಣವೇ?

-

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.