ಎಲ್ಲಾ ಕ್ರೀಡೆಗಳಿಗೂ ಸಮಾನ ಅವಕಾಶ ಸಿಗಲಿ: ಕಾಗೋಡು

7

ಎಲ್ಲಾ ಕ್ರೀಡೆಗಳಿಗೂ ಸಮಾನ ಅವಕಾಶ ಸಿಗಲಿ: ಕಾಗೋಡು

Published:
Updated:

ಹೊಸನಗರ: ಆಟವೆಂದರೆ ಕೇವಲ ಕ್ರಿಕೆಟ್ ಎಂಬ ಮನೋಭಾವ ಎಲ್ಲೆಡೆ ಬೆಳೆಯುತ್ತಿದೆ. ಇದು ಬದಲಾಗಿ ಎಲ್ಲ ಕ್ರೀಡೆಗಳಿಗೂ ಅವಕಾಶ ದೊರಕಬೇಕು ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಹೇಳಿದರು.ಪಟ್ಟಣದ ನೆಹರೂ ಮೈದಾನದಲ್ಲಿ ಡೈಮಂಡ್ ಜೇಸಿ ಮತ್ತು ಜಿಮ್ಮಿ ಜಾಜರ್ ವಾಲಿಬಾಲ್ ಕ್ಲಬ್ ಆಶ್ರಯದಲ್ಲಿ ಏರ್ಪಡಿಸಿದ್ದ ತಾಲೂಕು ಮಟ್ಟದ ಗ್ರಾಮಾಂತರ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.ಕ್ರಿಕೆಟ್ ಗೆ  ಸಿಗುತ್ತಿರುವ ಅತಿರೇಕದ ಪ್ರಚಾರದಿಂದ ಗ್ರಾಮೀಣ ಕ್ರೀಡೆಗಳಿಗೆ  ಪ್ರಾಮುಖ್ಯತೆ ಕಡಿಮೆಯಾಗುತ್ತಿದೆ. ಎಲ್ಲ ರೀತಿಯ ಆಟಗಳಿಗೂ ಪ್ರೋತ್ಸಾಹ ಮತ್ತು ಪ್ರಾಮುಖ್ಯತೆ ದೊರಕಬೇಕಿದ್ದು ಸಂಘ  ಸಂಸ್ಥೆಗಳು ಇದಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು.ಜಿಲ್ಲಾ ಪಂಚಾಯ್ತಿ ಸದಸ್ಯರಾದ ಕಲಗೋಡು ರತ್ನಾಕರ್, ಜ್ಯೋತಿ ಚಂದ್ರಮೌಳಿ, ತಾಪಂ ಅಧ್ಯಕ್ಷೆ ನಾಗರತ್ನಾ ದೇವರಾಜ್, ಉಪಾಧ್ಯಕ್ಷೆ ಗೀತಾ ನಿಂಗಪ್ಪ, ಸದಸ್ಯರಾದ ಕುನ್ನೂರು ಮಂಜಪ್ಪ, ನಿರ್ಮಲಾ ಗಣೇಶ್, ಪೂರ್ಣಿಮಾ, ಪಟ್ಟಣ ಪಂಚಾಯ್ತಿ ಸದಸ್ಯರಾದ ಹಾಲಗದ್ದೆ ಉಮೇಶ್, ರತ್ನಾಕರ ಶೆಟ್ಟಿ, ಚಂದ್ರಶೇಖರ ಶೇಟ್, ಡೈಮಂಡ್ ಜೇಸಿ ಅಧ್ಯಕ್ಷ ವಿನಾಯಕ ಅರೆಮನೆ, ಕಾರ್ಯದರ್ಶಿ ಗಣಪತಿಭಟ್ ಸಾಲಗೇರಿ, ಜಿಮ್ಮಿಜಾಜರ್ ವಾಲಿಬಾಲ್ ಕ್ಲಬ್ ಅಧ್ಯಕ್ಷ ಇಲಿಯಾಸ್, ವೇಣು, ಆದಶರ್ ಹಿರೇಮಣತಿ, ಎರಗಿ ಉಮೇಶ್, ಪ್ರಭಾಕರ್ ರಾವ್, ಜಯನಗರ ಗುರು  ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry