ಗುರುವಾರ , ನವೆಂಬರ್ 14, 2019
18 °C
ಮಿನುಗು ಮಿಂಚು

ಎಲ್ಲಿಯವನು ಈ ಸೂಪರ್‌ಮ್ಯಾನ್?

Published:
Updated:

ಸೂಪರ್‌ಮ್ಯಾನ್‌ನನ್ನು ಸೃಷ್ಟಿಸಿದ್ದು ಯಾರು?

ಸೂಪರ್‌ಮ್ಯಾನ್ ಪರಿಕಲ್ಪನೆ ಜಿಮ್ಮಿ ಸೀಗಲ್ ಅವರದ್ದು. ಜೋ ಶಸ್ಟರ್ ಅದನ್ನು ಚಿತ್ರವಾಗಿಸಿದರು.

ಸೂಪರ್‌ಮ್ಯಾನ್ ಎಲ್ಲಿಂದ ಬಂದವನು?

ಕಲ್-ಎಲ್ ಎಂಬುದು ಸೂಪರ್‌ಮ್ಯಾನ್ ಮೂಲ ಹೆಸರು. ಕ್ರಿಪ್ಟನ್ ಗ್ರಹದಲ್ಲಿ ಅವನು ಹುಟ್ಟಿದ್ದು. ಶೈಶವಾವಸ್ಥೆಯಲ್ಲಿಯೇ ಅವನನ್ನು ಸಣ್ಣ ಕ್ಯಾಪ್ಸೂಲ್‌ನಲ್ಲಿರಿಸಿ ಅವನ ತಂದೆ ಜೋರ್-ಎಲ್ ಭೂಮಿಗೆ ಕಳುಹಿಸಿದರು. ಕ್ರಿಪ್ಟನ್ ಗ್ರಹ ನಾಶವಾಗುವ ಕೆಲವೇ ಕ್ಷಣ ಮೊದಲು ಸೂಪರ್‌ಮ್ಯಾನ್‌ನನ್ನು ಭೂಮಿಗೆ ರವಾನಿಸಿದ್ದು.ಸೂಪರ್‌ಮ್ಯಾನ್ ಯಾವ ನಗರಿಯಲ್ಲಿ ವಾಸಿಸಿದ?

ಅಮೆರಿಕದ ಮಧ್ಯ ಪಶ್ಚಿಮದ ಸ್ಮಾಲ್‌ವಿಲ್ಲೆ ಎಂಬ ಸಣ್ಣ ಪಟ್ಟಣದಲ್ಲಿ ಅವನು ವಾಸಿಸಿದ.

ಸೂಪರ್‌ಮ್ಯಾನ್‌ಗೆ ಇರುವ ಇನ್ನೊಂದು ಹೆಸರೇನು? ಸೂಪರ್‌ಮ್ಯಾನ್ ಅಲ್ಲದ ಸ್ಥಿತಿಯಲ್ಲಿ ಅವನು ಯಾವ ಕೆಲಸ ಮಾಡುತ್ತಿದ್ದ?

ಕ್ಲಾರ್ಕ್ ಕೆಂಟಟ್ ಎಂಬುದು ಅವನ ಇನ್ನೊಂದು ಹೆಸರು. `ಡೈಲಿ ಪ್ಲಾನೆಟ್' ಎಂಬ ಪತ್ರಿಕೆಯ ವರದಿಗಾರನಾಗಿ ಅವನು ಕೆಲಸ ಮಾಡುತ್ತಿದ್ದ.ಅವನ ಪರಮ ಶತ್ರು ಯಾರು?

ಸೂಪರ್‌ಮ್ಯಾನ್‌ನ ಪರಮ ಶತ್ರು ಲೆಕ್ಸ್ ಲೂಥರ್. ಕೆಲವು ಕಾಮಿಕ್‌ಗಳಲ್ಲಿ ಲೆಕ್ಸ್ ಅಧಿಕಾರದಾಹ ಇರುವ ಹುಚ್ಚು ವಿಜ್ಞಾನಿ. ಇನ್ನು ಕೆಲವದರಲ್ಲಿ ಲೆಕ್ಸ್ ಕಾರ್ಪ್ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅರ್ಥಾತ್ ಭ್ರಷ್ಟ ಉದ್ಯಮಿ. ಕೆಲವು ಚಿತ್ರಗಳಲ್ಲಿ ಅವನನ್ನು ಕ್ಲಾರ್ಕ್ ಕೆಂಟ್‌ನ ಬಾಲ್ಯದ ಗೆಳೆಯ ಎಂದೂ ತೋರಿಸಲಾಗಿದೆ.

ಮೊದಲ ಸೂಪರ್‌ಮ್ಯಾನ್ ಕಾಮಿಕ್ ಪುಸ್ತಕ ಸಿಕ್ಕಿದ್ದು ಯಾವಾಗ?

ಮಾರ್ಚ್ 2009ರಲ್ಲಿ ಸೂಪರ್‌ಮ್ಯಾನ್ ಕಾಮಿಕ್‌ನ ಅಪರೂಪದ ಪ್ರತಿ ಸಿಕ್ಕಿತು. ಅದನ್ನು ಹರಾಜು ಹಾಕಲಾಗಿ, 3,17,200 ಡಾಲರ್ ಬೆಲೆಗೆ ಒಬ್ಬರು ಕೊಂಡುಕೊಂಡರು. ಹಸಿರು ಬಣ್ಣದ ಕಾರನ್ನು ಸೂಪರ್‌ಮ್ಯಾನ್ ಎತ್ತಿ ಎಸೆಯುವ ಚಿತ್ರವನ್ನು ಕಾಮಿಕ್‌ನ ಮುಖಪುಟ ಒಳಗೊಂಡಿತ್ತು. ಅವು ಮೊದಲು ಪ್ರಕಟಗೊಂಡಾಗ ಪ್ರತಿಯೊಂದರ ಬೆಲೆ ಕೇವಲ 10 ಸೆಂಟ್ ಆಗಿತ್ತು.

ಪ್ರತಿಕ್ರಿಯಿಸಿ (+)