ಶುಕ್ರವಾರ, ಏಪ್ರಿಲ್ 16, 2021
31 °C

ಎಲ್ಲೆಡೆ ಮಹಾ ಶಿವರಾತ್ರಿ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಮಹಾ ಶಿವರಾತ್ರಿ ಅಂಗವಾಗಿ ನಗರದ ವಿವಿಧ ದೇವಸ್ಥಾನಗಳಲ್ಲಿ ಬುಧವಾರ ವಿಶೇಷ ಪೂಜೆ, ರುದ್ರಾಭಿಷೇಕ, ಶಿವ ಭಜನೆ, ಜಾಗರಣೆ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮ ಸಡಗರ ಸಂಭ್ರಮದಿಂದ ಜರುಗಿದವು. ವಿಶ್ವ ಹಿಂದು ಪರಿಷತ್ ಆಶ್ರಯದಲ್ಲಿ ವಿದ್ಯಾಗಿರಿಯ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಸಾಮೂಹಿಕ ರುದ್ರಾಭಿಷೇಕ ಏರ್ಪಡಿಸಲಾಗಿತ್ತು.ರುದ್ರಾಭಿಷೇಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 80ಕ್ಕೂ ಅಧಿಕ ದಂಪತಿ ಶಿವ ನಾಮಸ್ಮರಣೆ ಮಾಡಿದರು.ಕ್ವಾರಿ ಬಳಿಯ ಸತ್ಯಂ ಶಿವಂ ಸುಂದರಂ ದೇವಾಲಯದಲ್ಲಿ ಬೆಳಿಗ್ಗೆ ಯಿಂದಲೇ ಭಕ್ತರ ಜಂಗುಳಿ ನೆರೆದಿತ್ತು. ಪರಮ ಮಂಗಲ ರೂಪಿ ಶಿವನಿಗೆ ಬಿಲ್ವಪತ್ರಗಳನ್ನು ಸಮರ್ಪಿಸಿ, ಸಕಲ ಪಾಪ ನಿವಾರಣೆ ಹಾಗೂ ಶಾಂತಿ, ನೆಮ್ಮದಿ ಕೋರಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ನವನಗರದ 25ನೇ ಸೆಕ್ಟರ್‌ನಲ್ಲಿರುವ ಶಿವಲಿಂಗ ದೇವಾಲಯ, ಹಳೆ ನಗರದ ಬಸವಣ್ಣನ ದೇವಸ್ಥಾನ ಹಾಗೂ ವಿದ್ಯಾಗಿರಿಯ ವಿವಿಧ ದೇವಸ್ಥಾನಗಳಲ್ಲಿ ಶಿವರಾತ್ರಿ ಅಂಗವಾಗಿ ವಿಶೇಷ ಪೂಜೆ ಹಾಗೂ ಶಿವ ಸ್ಮರಣೆ ನಡೆಯಿತು. ರಾಮಮಂದಿರ ನಿರ್ಮಾಣ: ಪ್ರತಿ ವರ್ಷದಂತೆ ವಿಶ್ವ ಹಿಂದು ಪರಿಷತ್ ವತಿಯಿಂದ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಸಾಮೂಹಿಕ ರುದ್ರಾಭಿಷೇಕ ಜರುಗಿತು.ಈ ಸಂದರ್ಭದಲ್ಲಿ ಮಾತನಾಡಿದ ಪರಿಷತ್‌ನ ಬೆಳಗಾವಿ ವಿಭಾಗ ಸಂಚಾಲಕ ಮಹಾಬಳೇಶ ಹೆಗಡೆ, ರಾಮ ಮಂದಿರ ನಿರ್ಮಾಣ ಕಾಲ ಸನ್ನಿಹಿತವಾಗಿದೆ ಎಂದರು.ಧರ್ಮಜಾಗೃತಿಗಾಗಿ ಪ್ರತಿಯೊಂದು ಊರುಗಳಲ್ಲೂ ಸಾಮೂಹಿಕ ರುದ್ರಾಭಿಷೇಕ ಹಮ್ಮಿಕೊಳ್ಳುವ ಅಗತ್ಯವಿದೆ ಎಂದು ಹೇಳಿದ ಅವರು, ಎಲ್ಲರೂ ಸಂಘಟಿತರಾಗಿ ಧರ್ಮ ಕಾರ್ಯಗಳಲ್ಲಿ ಪಾಲ್ಗೊಂಡಾಗ ದೇಶ ಅಭಿವೃದ್ಧಿ ಸಾಧಿಸಬಲ್ಲದು ಎಂದರು. ಚರಂತಿಮಠದ ಪ್ರಭುಸ್ವಾಮಿ, ಮಲ್ಲೇಶಪ್ಪ ಜಿಗಜಿನ್ನಿ, ಶಿವು ಮೇಲ್ನಾಡ, ವಿಜಯ ಸುಲಾಖೆ, ಭರತ ಲೋಖಂಡೆ, ಸಾಗರ ವೈದ್ಯ, ರವಿ ಗಾಣಿಗೇರ, ಮೋಹನ ದೇಶಪಾಂಡೆ ರುದ್ರಾಭಿಷೇಕದ ನೇತೃತ್ವ ವಹಿಸಿದ್ದರು.ಶಿವಮಂದಿರದಲ್ಲಿ ಪೂಜೆ


ಬಾದಾಮಿ: ಶಿವರಾತ್ರಿಯ ಅಂಗವಾಗಿ ಭಕ್ತರು ಉಪವಾಸ ವ್ರತ ಕೈಕೊಂಡು ಇಲ್ಲಿನ ಐತಿಹಾಸಿಕ ಮಾಲೆಗಿತ್ತಿ ಶಿವಾಲಯ, ವಿರೂಪಾಕ್ಷ ದೇವಾಲಯ, ಜಂಬುಲಿಂಗ ದೇವಾಲಯ ಹಾಗೂ ಮಲ್ಲಿಕಾರ್ಜುನ ಮಂದಿರಗಳ ಶಿವಲಿಂಗಕ್ಕೆ ಶ್ರದ್ಧೆ ಮತ್ತು ಭಕ್ತಿಯಿಂದ ಪೂಜೆ ಸಲ್ಲಿಸಿದರು.ಮಹಿಳೆಯರು ಹಾಗೂ ಮಕ್ಕಳು ಅತ್ಯಂತ ಪ್ರಾಚೀನ ತ್ರಿಕುಟೇಶ್ವರ ಜಂಬುಲಿಂಗ ದೇವಾಲಯದಲ್ಲಿ ಈಶ್ವರ ಲಿಂಗಕ್ಕೆ ಭಕ್ತಿಯಿಂದ ಪೂಜೆಯನ್ನು ಕೈಕೊಂಡರು. ಸಮೀಪದ ಮಹಾಕೂಟೇಶ್ವರ, ಪಟ್ಟದಕಲ್ಲಿನಲ್ಲಿ ವಿರೂಪಾಕ್ಷ ದೇವಾಲಯ ಹಾಗೂ ಶಿವಯೋಗ ಮಂದಿರಕ್ಕೆ ಭಕ್ತರು ತೆರಳಿ ಭಕ್ತಿಯಿಂದ ಶಿವಧ್ಯಾನ, ಬಿಲ್ವಾರ್ಚನೆ ಪೂಜೆ, ಭಜನೆ ಇನ್ನಿತರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.